alex Certify ಅಮೆಜಾನ್ ನಲ್ಲಿ 51,600 ರೂಪಾಯಿಗೆ ಸಿಗ್ತಿದೆ ಐಫೋನ್; ಅದಕ್ಕಿದೆ ಈ ಎಲ್ಲ ಕಂಡೀಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್ ನಲ್ಲಿ 51,600 ರೂಪಾಯಿಗೆ ಸಿಗ್ತಿದೆ ಐಫೋನ್; ಅದಕ್ಕಿದೆ ಈ ಎಲ್ಲ ಕಂಡೀಷನ್

ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 79,900 ರೂಪಾಯಿಗಳ ಐಫೋನ್ ಅನ್ನು ಕೇವಲ 51,600 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರವಾಗಿದೆ. ಅಲ್ಲದೇ, ಗರಿಷ್ಠ ಮಾರುಕಟ್ಟೆ ದರಕ್ಕಿಂತ ಸುಮಾರು 30,000 ರೂಪಾಯಿಗಳಷ್ಟು ಕಡಿಮೆಯಾಗಲಿದೆ.

ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ಅನ್ನು ಪಡೆಯಲಿದ್ದು, 3,395 ರೂಪಾಯಿಗಳ ರಿಯಾಯ್ತಿ ಪಡೆಯಲಿದ್ದಾರೆ. ಇದಿಷ್ಟೇ ಅಲ್ಲ. ಅಮೆಜಾನ್ ನ ಡೀಲ್ ಗಳನ್ನು ಗಮನಿಸಿದರೆ ಐಫೋನ್ 13 ಇನ್ನೂ ಕಡಿಮೆ ದರಕ್ಕೆ ಲಭ್ಯವಾಗಲಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಐಫೋನ್ ಖರೀದಿ ಮೇಲೆ 5,000 ರೂಪಾಯಿಗಳ ಡಿಸ್ಕೌಂಟ್ ಪಡೆಯಲಿದ್ದಾರೆ. ಇದರ ಜೊತೆಗೆ 3,400 ರೂಪಾಯಿ ಕ್ಯಾಶ್ ಬ್ಯಾಕ್ ದೊರೆಯಲಿದೆ.

ಇನ್ನು ಎಕ್ಸ್ ಚೇಂಜ್ ಆಫರ್ ನಲ್ಲಿ ಗರಿಷ್ಠ 12,900 ರೂಪಾಯಿಗಳ ಡಿಸ್ಕೌಂಟ್ ದೊರೆಯಲಿದೆ. ವಿನಿಮಯದ ಹಣ ಬೇರೆ ಬೇರೆ ಫೋನ್ ಗಳಿಗೆ ಬೇರೆ ಬೇರೆಯದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಐಫೋನ್ ಅನ್ನು 51,600 ರೂಪಾಯಿಗಳಿಗೆ ಖರೀದಿಸಬಹುದು ಎಂದು ಅಮೆಜಾನ್ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...