ಡಿಜಿಟಲ್ ಮಾರುಕಟ್ಟೆ ದೈತ್ಯ ಅಮೆಜಾನ್ ಕಂಪನಿಯು 1,25,000 ಗೋದಾಮು ಹಾಗೂ ಡೆಲಿವರಿ ಕೆಲಸಗಾರರು ನೇಮಿಸಿಕೊಳ್ಳಲು ಯೋಚಿಸಿದೆ ಎನ್ನಲಾಗಿದೆ. ವಿಶ್ವದ ಅತಿದೊಡ್ಡ ಆನ್ಲೈನ್ ಮಾರುಕಟ್ಟೆ ವ್ಯಾಪಾರಿಯಾದ ಅಮೆಜಾನ್ ಕಂಪನಿಯು ಮೇ ತಿಂಗಳಿನಿಂದ ವೇತನ ಏರಿಕೆ ಮಾಡಿದೆ. ಅಲ್ಲದೇ ಇನ್ನು ಕೆಲವು ಕಡೆಗಳಲ್ಲಿ 3000 ಡಾಲರ್ ಮೊತ್ತವನ್ನು ಬೋನಸ್ ರೂಪದಲ್ಲಿ ನೀಡಿದೆ ಎಂದು ಅಮೆಜಾನ್ ಡೆಲಿವರಿ ಸರ್ವೀಸ್ನ ಉಪಾಧ್ಯಕ್ಷ ಡೇವ್ ಬೋಜ್ಮನ್ ಹೇಳಿದ್ದಾರೆ.
ಅಮೆರಿಕದಲ್ಲಿ ಈ ತಿಂಗಳು 100 ಲಾಜಿಸ್ಟಿಕ್ಸ್ ತೆರೆಯಲಿದ್ದು ಇದರಲ್ಲಿ ಕೆಲಸ ನಿರ್ವಹಿಸುವ ಸಲುವಾಗಿ ಸಿಬ್ಬಂದಿ ನೇಮಕಕ್ಕೆ ಅಮೆಜಾನ್ ಮುಂದಾಗಿದೆ. ಈ ವರ್ಷದಲ್ಲಿ ಈಗಾಗಲೇ 250 ಲಾಜಿಸ್ಟಿಕ್ಗಳನ್ನು ಅಮೆಜಾನ್ ತೆರೆದಿತ್ತು.
ಅಮೆಜಾನ್ ಡೆಲಿವರಿ ಬಾಯ್ಸ್ಗಳಿಗೆ ನೀಡಲಾಗುವ ಆರಂಭಿಕ ವೇತನದ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ.1.25 ಲಕ್ಷ ಹೆಚ್ಚುವರಿ ಸಿಬ್ಬಂದಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ಅಮೆಜಾನ್ ಕಂಪನಿ ಯೋಚನೆ ನಡೆಸುತ್ತಿದೆ. ಇದು ಮಾತ್ರವಲ್ಲದೇ ವಿಶ್ವಾದ್ಯಂತ ಇನ್ನೂ 55000 ಟೆಕ್ & ಕಾರ್ಪೋರೇಟ್ ಹುದ್ದೆಯಲ್ಲೂ ನೇಮಕ ಮಾಡಿಕೊಳ್ಳುವುದಾಗಿ ಅಮೆಜಾನ್ ಹೇಳಿದೆ.