ಕೋವಿಡ್ ಕಾಲಘಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಆನ್ಲೈನ್ಗೆ ಅಂಟಿಕೊಂಡಿರುವ ದೇಶವಾಸಿಗಳನ್ನು ಶಾಪಿಂಗ್ನತ್ತ ಸೆಳೆಯಲು ಮತ್ತೊಂದು ಪ್ರೈಂ ಡೇ ಸೇಲ್ ಆರಂಭಿಸಲಿರುವ ಅಮೆಜಾನ್, ಇದೇ ಜುಲೈ 26ರಂದು ಇನ್ನೊಂದು ಸೇಲ್ ಮೇಳ ಇಟ್ಟುಕೊಂಡಿದೆ.
ಎರಡು ದಿನಗಳ ಈ ಸೇಲ್ನಲ್ಲಿ, ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯ ಆಫರ್ ಕೊಟ್ಟಿದ್ದು ತನ್ನ ಪ್ರೈಂ ಸದಸ್ಯರಿಗೆ ಮಾತ್ರವೇ ವಿಶೇಷವಾದ ಸೌಲಭ್ಯ ಕೊಡುತ್ತಿದೆ.
’ಅಡ್ವಾಂಟೇಜ್- ಜಸ್ಟ್ ಫಾರ್ ಪ್ರೈಂ’ ಎಂಬ ಹೆಸರಿನ ಈ ಪ್ರೋಗ್ರಾಂನಡಿ, ಗ್ರಾಹಕರಿಗೆ ಸ್ಮಾರ್ಟ್ಫೋನ್ ಖರೀದಿಯ ಇಎಂಐ ಪಾವತಿಗೆ ಹೆಚ್ಚಿನ ಕಂತುಗಳು ಹಾಗೂ ಉಚಿತವಾಗಿ ಸ್ಕ್ರೀನ್ ಬದಲಾವಣೆ ಮಾಡಿಕೊಡುವ ಅವಕಾಶ ಕೊಡಲಾಗಿದೆ. ಎಚ್ಡಿಎಫ್ಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಇರುವ ಗ್ರಾಹಕರು ಈ ಸ್ಕೀಂನ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.
ವಿಮೆಯ ಪ್ರಕಾರ ಆರು ತಿಂಗಳ ಅವಧಿಯಲ್ಲಿ ಸ್ಮಾರ್ಟ್ಫೋನ್ ಪರದೆ ಹಾನಿಯಾದಲ್ಲಿ ಉಚಿತವಾಗಿ ಅದನ್ನು ರಿಪ್ಲೇಸ್ ಮಾಡಿಕೊಳ್ಳಬಹುದಾಗಿದೆ.
ಪ್ರೈಂ ಸದಸ್ಯತ್ವ ಇರುವ ಮಂದಿಗೆ ಈ ಆಯ್ಕೆ ಉಚಿತವಾಗಿ ಸಿಕ್ಕರೆ, ಸದಸ್ಯತ್ವ ಇಲ್ಲದ ಮಂದಿ 999 ರೂ. ವರ್ಷದ ದರದಲ್ಲಿ ವಿಮೆ ಮಾಡಿಕೊಳ್ಳಬಹುದು.