alex Certify ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ತೂಕ ಇಳಿಯುತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ತೂಕ ಇಳಿಯುತ್ತೆ

ಸಿಹಿ ತಿನಿಸು ಮಾಡುವಾಗ ಒಣದ್ರಾಕ್ಷಿಯನ್ನು ಬಳಸುವುದು ಹೆಚ್ಚು. ಈ ಡ್ರೈ ಫ್ರುಟ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬ ಒಳ್ಳೆಯದು. ಒಣದ್ರಾಕ್ಷಿ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಹೋಗಲಾಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಣದ್ರಾಕ್ಷಿಯ ನೀರನ್ನು ನೀವು ಪ್ರತಿನಿತ್ಯ ಕುಡಿಯುವುದರಿಂದ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತೆ.

ಒಣದ್ರಾಕ್ಷಿಯ ನೀರನ್ನು ಹೀಗೆ ಮಾಡಿ : 2 ಕಪ್ ನೀರಿಗೆ 150 ಗ್ರಾಂ ಒಣದ್ರಾಕ್ಷಿಯನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಇದನ್ನು ಸ್ವಲ್ಪ ಬಿಸಿ ಮಾಡಿ ನಾದಿಕೊಂಡು ಖಾಲಿಹೊಟ್ಟೆಯಲ್ಲಿ ಕುಡಿಯಿರಿ. ಇದಕ್ಕೆ ಬೇಕಾದರೆ ನೀವು ನಿಂಬೆಹಣ್ಣನ್ನು ಹಾಕಿಕೊಳ್ಳಬಹುದು.

ಒಣದ್ರಾಕ್ಷಿಯ ನೀರಿನ ಉಪಯೋಗ :

ಪ್ರತಿದಿನ ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಲಿವರ್ ಬಲಗೊಳ್ಳುತ್ತದೆ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ. ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ.

ಖಾಲಿ ಹೊಟ್ಟೆಯಲ್ಲಿ 1 ಲೋಟ ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಮೆಟಾಬಾಲಿಜಮ್ ಬೂಸ್ಟ್ ಆಗುತ್ತದೆ. ಇದು ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ.

ಇದರಿಂದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವುದಿಲ್ಲ. ಹೃದಯದ ತೊಂದರೆಯ ಭಯವೂ ಇರುವುದಿಲ್ಲ.

ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.

ಒಣದ್ರಾಕ್ಷಿ  ಚರ್ಮದಲ್ಲಿ ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಸುಕ್ಕುಗಳು, ಕಪ್ಪುಕಲೆ ಮತ್ತು ಮಚ್ಚೆಗಳಂತಹ ಸಮಸ್ಯೆಗಳು ದೂರವಾಗುತ್ತದೆ. ಒಣದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಮಲಬದ್ಧತೆ, ಆಯಾಸ ಮತ್ತು ಎಸಿಡಿಟಿಯಂತ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಒಣದ್ರಾಕ್ಷಿಯಲ್ಲಿರುವ ಬೋರಾನ್ ಅಂಶ ಮೂಳೆಗಳನ್ನು ಬಲಗೊಳಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಮ್ ಕೂಡ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಇದರಲ್ಲಿರುವ ಎಂಟಿಆಕ್ಸಿಡೆಂಟ್ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರೆಡಿಕಲ್ಸ್ ನಿಂದ ದೇಹವನ್ನು ರಕ್ಷಿಸುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...