alex Certify ಸಂಸದೆ ಪ್ರಗ್ಯಾ ಠಾಕೂರ್​ ಮತ್ತೊಂದು ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸದೆ ಪ್ರಗ್ಯಾ ಠಾಕೂರ್​ ಮತ್ತೊಂದು ವಿಡಿಯೋ ವೈರಲ್

ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್​ ಬಾಸ್ಕೆಟ್​ ಬಾಲ್​ ಆಡುತ್ತಿರುವ ವಿಡಿಯೋ ವೈರಲ್​ ಆಗಿರುವ ಬೆನ್ನಲ್ಲೇ ಇದೀಗ ಮದುವೆ ಸಮಾರಂಭವೊಂದರಲ್ಲಿ ನೃತ್ಯ ಮಾಡುತ್ತಿರುವ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಈ ವಿಡಿಯೋದಿಂದಾಗಿ ಕಾಂಗ್ರೆಸ್​ಗೆ ಪ್ರಗ್ಯಾ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತೆ ಆಗಿದ್ದು ಮಾಲೆಂಗಾವ್​ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಅನಾರೋಗ್ಯ ನೆಪ ಹೇಳುತ್ತಿದ್ದ ಸಂಸದೆಯನ್ನ ಟೀಕಿಸಿದೆ.

ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್​ ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ಬಡ ಮನೆಯ ಅವಳಿ ಹೆಣ್ಣು ಮಕ್ಕಳ ಮದುವೆಯನ್ನ ಮಾಡಿಸಿದ್ದಾರೆ. ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಗ್ಯಾ ಹೆಣ್ಣುಮಕ್ಕಳ ಕುಟುಂಬಸ್ಥರ ಜೊತೆ ಹೆಜ್ಜೆ ಹಾಕಿದ್ದಾರೆ.‌

ಪ್ರಗ್ಯಾ ಠಾಕೂರ್​​​ ನೀಡಿದ ಸಹಾಯದ ಕುರಿತು ಮಾತನಾಡಿದ ಇಬ್ಬರು ಹೆಣ್ಣು ಮಕ್ಕಳು ನಮಗೆ ತುಂಬಾನೇ ಸಂತಸವಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇದೇ ವಿಚಾರವಾಗಿ ವಧುಗಳ ತಂದೆ ಕೂಡ ಮಾತನಾಡಿದ್ದು, ನಾನೊಬ್ಬ ದಿನಗೂಲಿ ಕಾರ್ಮಿಕನಾಗಿದ್ದೇನೆ. ಹೆಣ್ಣು ಮಕ್ಕಳ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದ ಸಂದರ್ಭದಲ್ಲಿ ಭೋಪಾಲ್​ ಸಂಸದೆ ಪ್ರಗ್ಯಾ ಠಾಕೂರ್​ ನಮಗೆ ಸಹಾಯ ಮಾಡಿದ್ದಾರೆ. ಇದರಿಂದ ನನಗೆ ಮತ್ತೊಂದು ಜೀವನ ಸಿಕ್ಕಂತಾಗಿದೆ. ಪ್ರಗ್ಯಾ ಠಾಕೂರ್​ ನಮ್ಮ ಪಾಲಿನ ದೇವರಿದ್ದಂತೆ ಎಂದು ಹೇಳಿದ್ದಾರೆ.

ಆದರೆ ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ಕಾಂಗ್ರೆಸ್​ ನಾಯಕ ನರೇಂದ್ರ ಸಲುಜಾ ಪ್ರಗ್ಯಾ ಠಾಕೂರ್​ರನ್ನ ಟೀಕಿಸಿದ್ದಾರೆ.
ನಾವು ಯಾವಾಗ ಭೋಪಾಲ್​ ಸಂಸದೆ, ಸಹೋದರಿ ಪ್ರಗ್ಯಾ ಠಾಕೂರ್​ನ್ನ ನೋಡಿದ್ರೂ ಸಹ ಅವರು ಬಾಸ್ಕೆಟ್​ ಬಾಲ್​ ಆಡುತ್ತಾ ಇಲ್ಲವೇ ಯಾವುದೇ ಸಹಾಯವೇ ಇಲ್ಲದೇ ನಡೆಯುತ್ತಾ ಅಥವಾ ಈ ರೀತಿ ಸಂತಸವಾಗಿ ನೃತ್ಯ ಮಾಡುತ್ತಾ ಇರ್ತಾರೆ. ಇದರಿಂದ ನಮಗೆ ಖುಷಿಯಾಗುತ್ತದೆಯೇ..? ಎಂದು ಟ್ವೀಟಾಯಿಸಿದ್ದಾರೆ.

ಜುಲೈ 1ನೇ ತಾರೀಖಿನಂದು ಪ್ರಗ್ಯಾ ಠಾಕೂರ್​ ಬಾಸ್ಕೆಟ್​ ಬಾಲ್​ ಆಡುತ್ತಿರುವ ವಿಡಿಯೋ ಶೇರ್​ ಮಾಡಿದ್ದ ನರೇಂದ್ರ ಸಲುಜಾ, ಕೆಲ ಸಮಯದ ಹಿಂದಷ್ಟೇ ನಾವು ಪ್ರಗ್ಯಾ ಠಾಕೂರ್​ ವ್ಹೀಲ್​ ಚೇರ್​ನ ಮೇಲೆ ಇದ್ದಿದ್ದನ್ನ ನೋಡಿದ್ದೆವು. ಆದರೆ ಈಗ ಅವರು ಭೋಪಾಲ್​ ಸ್ಟೇಡಿಯಂನಲ್ಲಿ ಬಾಸ್ಕೆಟ್​ ಬಾಲ್​ ಆಡುತ್ತಿರೋದನ್ನ ನೋಡೋಕೆ ನಿಜಕ್ಕೂ ಸಂತಸವಾಗ್ತಿದೆ ಎಂದು ವ್ಯಂಗ್ಯ ಮಾಡಿದ್ದರು.

2008ರ ಮಲೆಂಗಾವ್​ ಬಾಂಬ್​ ಸ್ಪೋಟದ ಆರೋಪಿಯಾಗಿರುವ ಪ್ರಗ್ಯಾ ಠಾಕೂರ್​ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. 2017ರಂದು ಜಾಮೀನಿನ ಮೂಲಕ ಅವರು ಜೈಲಿನಿಂದ ಹೊರಬಂದಿದ್ದಾರೆ.

— Narendra Saluja (@NarendraSaluja) July 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...