ಉತ್ತರಾಖಂಡ್ನಲ್ಲಿ ಡೆಹರಾಡೂನ್ – ರಾಣಿಪೋಖಾರಿ – ರಿಷಿಕೇಷಕ್ಕೆ ತೆರಳು ನಿರ್ಮಿಸಲಾಗಿದ್ದ ಪರ್ಯಾಯ ಹೆದ್ದಾರಿಯು ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದೆ.
ರಾಣಿಪೋಖರಿಯಲ್ಲಿ ಫ್ಲೈಓವರ್ ಕುಸಿತ ಹಿನ್ನೆಲೆಯಲ್ಲಿ ಡೆಹ್ರಾಡೂನ್, ರಿಷಿಕೇಷಕ್ಕೆ ಸಂಪರ್ಕ ಸಾಧಿಸುವ ಸಲುವಾಗಿ ಈ ಪರ್ಯಾಯ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ರಸ್ತೆಯು ಕೊಚ್ಚಿ ಹೋಗಿದೆ.
ಸೋಶಿಯಲ್ ಮೀಡಿಯಾದಲ್ಲಿ ರಸ್ತೆಯು ಕೊಚ್ಚಿಹೋದ ವಿಡಿಯೋಗಳು ವೈರಲ್ ಆಗಿದೆ. ಮಳೆಯ ರಭಸಕ್ಕೆ ರಸ್ತೆಯಲ್ಲಿದ್ದ ಕೆಲ ವಾಹನಗಳು ಸಮೇತ ಕೊಚ್ಚಿಕೊಂಡು ಹೋಗಿವೆ.
ಆಗಸ್ಟ್ 27ರಂದು ಡೆಹ್ರಾಡೂನ್ – ರಿಷಿಕೇಷ ಬ್ರಿಡ್ಜ್ ಕುಸಿತವಾಗಿತ್ತು. ಕೆಳಗೆ ಹರಿಯುತ್ತಿರುವ ನದಿಯ ಮೇಲೆ ಸೇತುವೆ ಕುಸಿದು ವಾಹನಗಳು ಸಿಕ್ಕಿ ಬಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಭೂ ವಿಜ್ಞಾನಿಗಳ ತಂಡವು ಸೋಮವಾರ ಮಳೆಯಿಂದ ಹಾನಿ ಅನುಭವಿಸಿರುವ ಜುಮ್ಮಾ ಗ್ರಾಮ ಹಾಗೂ ಉತ್ತರಾಖಂಡದ ಫಿಥೋರಘರ್ ಜಿಲ್ಲೆಯ ಪಕ್ಕದ ಕುಗ್ರಾಮಗಳ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಿಸಲು ಸೂಚನೆ ನೀಡಿತ್ತು.