alex Certify ಮನೆಯಲ್ಲೇ ತಯಾರಿಸಬಹುದು ರೆಸ್ಟೋರೆಂಟ್ ಮಾದರಿಯ ಆಲೂ ಮಂಚೂರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ತಯಾರಿಸಬಹುದು ರೆಸ್ಟೋರೆಂಟ್ ಮಾದರಿಯ ಆಲೂ ಮಂಚೂರಿ..!

ಬೇಕಾಗುವ ಸಾಮಗ್ರಿ : ಆಲೂಗಡ್ಡೆ – 3, ಜೋಳದ ಹಿಟ್ಟು – 1 ಕಪ್​, ಈರುಳ್ಳಿ – 1, ಶುಂಠಿ ಬೆಳ್ಳುಳ್ಳಿ ಪೇಸ್ಟ್​ – 1ಚಮಚ, ಬೆಳ್ಳುಳ್ಳಿ – 5 ಎಸಳು(ಸಣ್ಣಗೆ ತುರಿದಿದ್ದು), ಈರುಳ್ಳಿ ಎಲೆ – 1/2 ಕಪ್​, ದೊಡ್ಡ ಮೆಣಸಿನಕಾಯಿ – 1, ಕೊತ್ತಂಬರಿ ಸೊಪ್ಪು – 1/2 ಕಪ್​, ಟೊಮ್ಯಾಟೋ ಸಾಸ್​ – 4 ಚಮಚ, ಚಿಲ್ಲಿ ಸಾಸ್​ – 1 ಚಮಚ, ವಿನೀಗರ್​ – 1/2 ಚಮಚ, ಎಣ್ಣೆ – ಕರಿಯಲು, ಖಾರದ ಪುಡಿ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು, ಖಾರದ ಪುಡಿ, ಸ್ವಲ್ಪ ಉಪ್ಪು ಸೇರಿಸಿ ನೀರು ಮಿಶ್ರಣ ಮಾಡಿ ಕಲಿಸಿಕೊಳ್ಳಿ. ಈ ಮಿಶ್ರಣಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಕಲಿಸಿ. ಎಣ್ಣೆ ಕಾದ ಬಳಿಕ ಈ ಆಲೂಗಡ್ಡೆಯನ್ನು ಕರಿಯಲು ಆರಂಭಿಸಿ. ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಎತ್ತಿಟ್ಟುಕೊಳ್ಳಿ.

ಇದೀಗ ಒಲೆಯ ಮೇಲೆ ಇನ್ನೊಂದು ಪಾತ್ರೆಯನ್ನಿಡಿ. ಇದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಬಳಿಕ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೂ ಕರಿಯಿರಿ, ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್​, ಬೆಳ್ಳುಳ್ಳಿಯನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಬೇಕು.

ಇದಕ್ಕೆ ಈರುಳ್ಳಿ ಎಲೆ, ಕೊತ್ತಂಬರಿ ಸೊಪ್ಪು, ಟೊಮ್ಯಾಟೋ ಸಾಸ್​, ವಿನೀಗರ್, ಚಿಲ್ಲಿಸಾಸ್​​ ಎಲ್ಲವನ್ನೂ ಹಾಕಿ.

ಈಗ ಈ ಗ್ರೇವಿಗೆ ನೀವು ಆಗಲೇ ಕರಿದುಕೊಂಡ ಕರಿದು ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಕಲಿಸಿ. ಈ ಹಂತದಲ್ಲಿ ನಿಮಗೆ ಉಪ್ಪು ಕಡಿಮೆ ಎನಿಸಿದರೆ ಹಾಕಿಕೊಳ್ಳಬಹುದು. ಇದನ್ನು ಒಂದು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪಿನಲ್ಲಿ ಅಲಂಕರಿಸಿ ಸವಿಯಲು ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...