ಬೇಕಾಗುವ ಸಾಮಗ್ರಿ : ಆಲೂಗಡ್ಡೆ – 3, ಜೋಳದ ಹಿಟ್ಟು – 1 ಕಪ್, ಈರುಳ್ಳಿ – 1, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಬೆಳ್ಳುಳ್ಳಿ – 5 ಎಸಳು(ಸಣ್ಣಗೆ ತುರಿದಿದ್ದು), ಈರುಳ್ಳಿ ಎಲೆ – 1/2 ಕಪ್, ದೊಡ್ಡ ಮೆಣಸಿನಕಾಯಿ – 1, ಕೊತ್ತಂಬರಿ ಸೊಪ್ಪು – 1/2 ಕಪ್, ಟೊಮ್ಯಾಟೋ ಸಾಸ್ – 4 ಚಮಚ, ಚಿಲ್ಲಿ ಸಾಸ್ – 1 ಚಮಚ, ವಿನೀಗರ್ – 1/2 ಚಮಚ, ಎಣ್ಣೆ – ಕರಿಯಲು, ಖಾರದ ಪುಡಿ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು, ಖಾರದ ಪುಡಿ, ಸ್ವಲ್ಪ ಉಪ್ಪು ಸೇರಿಸಿ ನೀರು ಮಿಶ್ರಣ ಮಾಡಿ ಕಲಿಸಿಕೊಳ್ಳಿ. ಈ ಮಿಶ್ರಣಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಕಲಿಸಿ. ಎಣ್ಣೆ ಕಾದ ಬಳಿಕ ಈ ಆಲೂಗಡ್ಡೆಯನ್ನು ಕರಿಯಲು ಆರಂಭಿಸಿ. ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಎತ್ತಿಟ್ಟುಕೊಳ್ಳಿ.
ಇದೀಗ ಒಲೆಯ ಮೇಲೆ ಇನ್ನೊಂದು ಪಾತ್ರೆಯನ್ನಿಡಿ. ಇದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಬಳಿಕ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೂ ಕರಿಯಿರಿ, ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿಯನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಬೇಕು.
ಇದಕ್ಕೆ ಈರುಳ್ಳಿ ಎಲೆ, ಕೊತ್ತಂಬರಿ ಸೊಪ್ಪು, ಟೊಮ್ಯಾಟೋ ಸಾಸ್, ವಿನೀಗರ್, ಚಿಲ್ಲಿಸಾಸ್ ಎಲ್ಲವನ್ನೂ ಹಾಕಿ.
ಈಗ ಈ ಗ್ರೇವಿಗೆ ನೀವು ಆಗಲೇ ಕರಿದುಕೊಂಡ ಕರಿದು ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಕಲಿಸಿ. ಈ ಹಂತದಲ್ಲಿ ನಿಮಗೆ ಉಪ್ಪು ಕಡಿಮೆ ಎನಿಸಿದರೆ ಹಾಕಿಕೊಳ್ಳಬಹುದು. ಇದನ್ನು ಒಂದು ತಟ್ಟೆಗೆ ಹಾಕಿ ಕೊತ್ತಂಬರಿ ಸೊಪ್ಪಿನಲ್ಲಿ ಅಲಂಕರಿಸಿ ಸವಿಯಲು ನೀಡಿ.