
ಈ ವಿಡಿಯೋ ಇಂಟರ್ನೆಟ್ನಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿದೆ ಅಂದರೆ ಗೂಗಲ್ ಸಿಇಓ ಸುಂದರ್ ಪಿಚ್ಚೈರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.
ಫ್ಲೋರಿಡಾದಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದಾಗಿದೆ. ಮೊಸಳೆಯೊಂದು ತನ್ನ ತಲೆಯ ಮೇಲೆ ಸುತ್ತುತ್ತಿದ್ದ ಡ್ರೋನ್ ಕ್ಯಾಮರಾವನ್ನೇ ಗುರಾಯಿಸುತ್ತಿತ್ತು. ಒಮ್ಮೆಲೆ ಡ್ರೋಣ್ ಕ್ಯಾಮರಾವನ್ನು ಮೊಸಳೆ ಬಾಯಿಯೊಳಕ್ಕೆ ಹಾಕಿಕೊಳ್ಳುತ್ತಿದ್ದಂತೆಯೇ ಅದರ ಬಾಯಿಯಿಂದ ಹೊಗೆ ಕಾಣಿಸಿಕೊಂಡಿದೆ.
ಮರದ ರೆಂಬೆಗಳ ನಡುವೆ ಸಿಲುಕಿದ್ದ ಹಸುವಿನ ರಕ್ಷಣೆ: ವಿಡಿಯೋ ವೈರಲ್
ಡ್ರೋನ್ ನಿಯಂತ್ರಕ ಈ ಬಗ್ಗೆ ಮಾತನಾಡಿದ್ದು ಡ್ರೋನ್ ಕ್ಯಾಮರಾದಲ್ಲಿರುವ ಸೆನ್ಸಾರ್ ಮೊಸಳೆಯಿಂದ ಡ್ರೋನ್ ಕ್ಯಾಮರಾವನ್ನು ಸುರಕ್ಷಿತ ದೂರದಲ್ಲಿ ಇಡುತ್ತದೆ ಎಂದೇ ಭಾವಿಸಿದ್ದೆವು. ಮೊಸಳೆ ಬಾಯಿ ತೆರೆಯುತ್ತಿದ್ದಂತೆಯೇ ನಾವು ಕ್ಲೋಸ್ ಶಾಟ್ಸ್ ತೆಗೆಯಲು ಮುಂದಾದೆವು. ಹಾಗೂ ಸರಿಯಾದ ಸಮಯಕ್ಕೆ ಡ್ರೋನ್ ಅಲ್ಲಿಂದ ಹಾರುತ್ತದೆ ಎಂದುಕೊಂಡಿದ್ದೆವು ಎಂದು ಹೇಳಿದ್ದಾರೆ.
https://youtu.be/gus5FMGtEok?t=40