ಬೆಂಗಳೂರು : ಗುತ್ತಿಗೆದಾರರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಕಾಮಗಾರಿ ಬಿಲ್ ತಡೆ ಆದೇಶ ವಾಪಸ್ ಪಡೆದು ಆದೇಶ ಹೊರಡಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲಾ ಇಲಾಖೆ, ನಿಗಮಗಳ ಕಾಮಗಾರಿಗಳ ಬಿಲ್ ಗೆ ತಡೆಯೊಡ್ಡಲಾಗಿತ್ತು, . ಇದೀಗ ಬಿಲ್ ತಡೆ ಆದೇಶ ವಾಪಸ್ ಪಡೆದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕ್ ರೂಪ್ ಕೌರ್ ಸುತ್ತೋಲೆ ಹೊರಡಿಸಿದ್ದಾರೆ.
ಎಲ್ಲಾ ಇಲಾಖೆಗಳು ಹಾಗೂ ಇಲಾಖೆಗಳ ಮುಂದುವರೆದ ಅಧೀನಕ್ಕೊಳಪಡುವ ಕಾಮಗಾರಿಗಳಿಗೆ ನಿಗಮ/ಮಂಡಳಿ/ಪ್ರಾಧಿಕಾರಗಳ ಸಂಬಂಧಿಸಿದಂತೆ ಬಿಲ್ಲುಗಳ ನೈಜತೆಯನ್ನು ಹಾಗೂ ನಿಯಮಾನುಸಾರವಿರುವುದನ್ನು ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವುದು.
ಎಲ್ಲಾ ಶಾಸನಬದ್ಧ ಪಾವತಿಗಳನ್ನು ಹಾಗೂ ಬಾಹ್ಯ ನೆರವಿನ ಮುಂದುವರೆದ ಯೋಜನೆಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ/ಪಾವತಿಗಳನ್ನು ಮಾಡುವುದು. ಮುಂದುವರಿದ ಕಾರ್ಯಕ್ರಮ/ಯೋಜನೆಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗಳ ಸಂಬಂಧ ಹಣ ಬಿಡುಗಡೆ ಮಾಡಬಹುದಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.