alex Certify ʼಆಯುಷ್ಮಾನ್​ ಭಾರತ್ʼ​ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: ಉಚಿತವಾಗಿ ಸಿಗಲಿದೆ ಅರ್ಹತಾ ಕಾರ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಯುಷ್ಮಾನ್​ ಭಾರತ್ʼ​ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: ಉಚಿತವಾಗಿ ಸಿಗಲಿದೆ ಅರ್ಹತಾ ಕಾರ್ಡ್

ಆಯುಷ್ಮಾನ್​ ಭಾರತ್​ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಗಳು ಈಗ ತಮ್ಮ ಅರ್ಹತಾ ಕಾರ್ಡ್​ಗಳನ್ನ ಉಚಿತವಾಗಿ ಪಡೆಯಬಹುದಾಗಿದೆ. ಗ್ರಾಮ ಮಟ್ಟದ ನಿರ್ವಾಹಕರಿಗೆ ಆಯುಷ್ಮಾನ್​ ಫಲಾನುಭವಿಗಳು ಪಾವತಿ ಮಾಡಬೇಕಿದ್ದ 30 ರೂಪಾಯಿ ಶುಲ್ಕವನ್ನ ಕೇಂದ್ರ ಸರ್ಕಾರ ಶುಕ್ರವಾರ ಮನ್ನಾ ಮಾಡಿದೆ.

ಆದರೆ ಡುಪ್ಲಿಕೇಟ್​ ಕಾರ್ಡ್​ ಅಥವಾ ಮರುಮುದ್ರಣಕ್ಕಾಗಿ ತೆರಿಗೆಗಳನ್ನ ಹೊರತುಪಡಿಸಿ 15 ರೂಪಾಯಿಯನ್ನ ಫಲಾನುಭವಿ ಪಾವತಿ ಮಾಡಬೇಕಾಗುತ್ತದೆ.

ಮಧ್ಯಮ ವರ್ಗದ ಜನತೆಗೆ ಭರ್ಜರಿ ಗುಡ್‌ ನ್ಯೂಸ್:‌ ನನಸಾಗಲಿದೆ ಸ್ವಂತ ಸೂರು ಹೊಂದುವ ಕನಸು

ಆಯುಷ್ಮಾನ್​ ಯೋಜನೆಯ ಅನುಷ್ಠಾನ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಪ್ರಾದಿಕಾರ ಶುಕ್ರವಾರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ ನಂತರ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...