ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಗಳು ಈಗ ತಮ್ಮ ಅರ್ಹತಾ ಕಾರ್ಡ್ಗಳನ್ನ ಉಚಿತವಾಗಿ ಪಡೆಯಬಹುದಾಗಿದೆ. ಗ್ರಾಮ ಮಟ್ಟದ ನಿರ್ವಾಹಕರಿಗೆ ಆಯುಷ್ಮಾನ್ ಫಲಾನುಭವಿಗಳು ಪಾವತಿ ಮಾಡಬೇಕಿದ್ದ 30 ರೂಪಾಯಿ ಶುಲ್ಕವನ್ನ ಕೇಂದ್ರ ಸರ್ಕಾರ ಶುಕ್ರವಾರ ಮನ್ನಾ ಮಾಡಿದೆ.
ಆದರೆ ಡುಪ್ಲಿಕೇಟ್ ಕಾರ್ಡ್ ಅಥವಾ ಮರುಮುದ್ರಣಕ್ಕಾಗಿ ತೆರಿಗೆಗಳನ್ನ ಹೊರತುಪಡಿಸಿ 15 ರೂಪಾಯಿಯನ್ನ ಫಲಾನುಭವಿ ಪಾವತಿ ಮಾಡಬೇಕಾಗುತ್ತದೆ.
ಮಧ್ಯಮ ವರ್ಗದ ಜನತೆಗೆ ಭರ್ಜರಿ ಗುಡ್ ನ್ಯೂಸ್: ನನಸಾಗಲಿದೆ ಸ್ವಂತ ಸೂರು ಹೊಂದುವ ಕನಸು
ಆಯುಷ್ಮಾನ್ ಯೋಜನೆಯ ಅನುಷ್ಠಾನ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಪ್ರಾದಿಕಾರ ಶುಕ್ರವಾರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ ನಂತರ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದೆ.