alex Certify ಫೋಟೋಗ್ರಾಫರ್​ ಚಪ್ಪಲಿ ಹುಡುಕಿಕೊಟ್ಟ ಆಲಿಯಾ ಭಟ್​ : ಭೇಷ್​ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋಗ್ರಾಫರ್​ ಚಪ್ಪಲಿ ಹುಡುಕಿಕೊಟ್ಟ ಆಲಿಯಾ ಭಟ್​ : ಭೇಷ್​ ಎಂದ ನೆಟ್ಟಿಗರು

ಬಾಲಿವುಡ್​ ನಟಿ ಆಲಿಯಾ ಭಟ್​ ತನ್ನ ತಾಯಿ ಸೋನಿ ರಜ್ಡಾನ್​ ಹಾಗೂ ಸಹೋದರಿ ಶಾಹೀನ್​ ಭಟ್​ ಜೊತೆಯಲ್ಲಿ ಇತ್ತೀಚಿಗೆ ಔತಣಕೂಟವೊಂದರಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ನಟಿ ಆಲಿಯಾ ಭಟ್​​ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈನ ಫ್ಯಾನ್ಸಿ ರೆಸ್ಟಾರೆಂಟ್​ ಒಂದರಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಆಲಿಯಾ ಭಟ್​ ಪಾದರಕ್ಷೆಯನ್ನು ಕಳೆದುಕೊಂಡಿದ್ದ ಫೋಟೋಗ್ರಾಫರ್​ಗೆ ಅವರ ಪಾದರಕ್ಷೆಗಳನ್ನು ಹುಡುಕಿಕೊಳ್ಳಲು ಸಹಾಯ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಆಲಿಯಾ ತನ್ನ ತಾಯಿ ಹಾಗೂ ಸಹೋದರಿಯೊಂದಿಗೆ ರೆಸ್ಟಾರೆಂಟ್​ನ ಹೊರಗೆ ಪಪ್ಪರಾಜಿಗಳಿಗೆ ಕಾಣಿಸಿಕೊಂಡಿದ್ದಾರೆ. ಮಾರ್ಗ ಮಧ್ಯದಲ್ಲಿ ಕಂಡ ಚಪ್ಪಲಿಯನ್ನು ನೋಡಿ ಇದು ಯಾರ ಚಪ್ಪಲಿ ಎಂದು ಆಲಿಯಾ ತನ್ನ ತಂದೆಯನ್ನು ಕೇಳಿದ್ದಾರೆ.

ಆಗ ಅಲ್ಲಿಯೇ ಇದ್ದ ಫೋಟೋಗ್ರಾಫರ್​ ಒಬ್ಬರು ಇದು ನಮ್ಮಲ್ಲೇ ಒಬ್ಬ ಪಪ್ಪರಾಜಿಗೆ ಸೇರಿದ್ದು ಎಂದು ಹೇಳಿದ್ದಾರೆ. ಕೂಡಲೇ ಆ ಚಪ್ಪಲಿಯನ್ನು ತನ್ನ ಕೈನಿಂದ ಎತ್ತಿಕೊಂಡ ಆಲಿಯಾ ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಿದ್ದಾರೆ.

ಆಲಿಯಾರ ಈ ವರ್ತನೆಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದು ಆಲಿಯಾ ಭಟ್​ರಂತೆಯೇ ಯಾರೂ ಇಲ್ಲ. ಅವರು ಎಲ್ಲರೊಂದಿಗೆ ಸೌಮ್ಯವಾಗಿ ವರ್ತಿಸುತ್ತಾರೆ. ಆದರೆ ಇವರನ್ನು ಅನಗತ್ಯವಾಗಿ ಟ್ರೋಲ್​ ಮಾಡಲಾಗ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...