ಐಐಟಿ-ಕಾನ್ಪುರ ಬೆಂಬಲಿಸುತ್ತಿರುವ ಸ್ಟಾರ್ಟ್ ಅಪ್ ಫೂಲ್.ಕೋನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹೂಡಿಕೆ ಮಾಡಿದ್ದಾರೆ ಎಂದು ಕಂಪನಿ ಘೋಷಿಸಿದೆ.
2017ರಲ್ಲಿ ಇಂಜಿನಿಯರಿಂಗ್ ಪದವೀಧರ ಅಂಕಿತ್ ಅಗರ್ವಾಲ್‌ರಿಂದ ಸ್ಥಾಪಿತವಾದ ಈ ಸ್ಟಾರ್ಟ್‌ಅಪ್, ಹೂವಿನ ತ್ಯಾಜ್ಯವನ್ನು ಕಲ್ಲಿದ್ದಲು-ಮುಕ್ತ ಐಷಾರಾಮಿ ಸುಗಂಧ ಉತ್ಪನ್ನಗಳನ್ನಾಗಿ ಹಾಗೂ ಆರೋಗ್ಯೋತ್ಪನ್ನಗಳನ್ನಾಗಿ ಪರಿವರ್ತಿಸುವ ಕೆಲಸವನ್ನು ಮಾಡುತ್ತಿದೆ.
ಮುಖದ ಹೊಳಪು ಹೆಚ್ಚಿಸಲು ಸಕ್ಕರೆ ಬಳಸಿ…
“ಫೂಲ್ ಸುಗಂಧವು ತನ್ನ ಸ್ವಾಭಾವಿಕ ಸುಗಂಧಗಳು ಹಾಗೂ ಅದ್ಭುತ ಪ್ಯಾಕಿಂಗ್ ಮೂಲಕ ನಿಜಕ್ಕೂ ಸೆಳೆಯುತ್ತವೆ. ಮರುಬಳಸಲ್ಪಟ್ಟ ಹೂವುಗಳಿಂದ ಸುಗಂಧ ಹಾಗೂ ಜೈವಿಕ-ಚರ್ಮ ಉತ್ಪಾದಿಸುವ ಸಂಸ್ಥಾಪಕರ ದೂರದೃಷ್ಟಿಯನ್ನು ನಾನು ನಿಜಕ್ಕೂ ಇಷ್ಟ ಪಡುತ್ತೇನೆ. ಈ ಮೂಲಕ ನಮ್ಮ ನದಿಗಳನ್ನು ಸ್ವಚ್ಛವಾಗಿಡುವುದಲ್ಲದೇ, ಚರ್ಮಕ್ಕೆ ಪರ್ಯಾಯಗಳನ್ನು ಕೊಂಡುಕೊಂಡು, ಮಹಿಳೆಯರಿಗೆ ಉದ್ಯೋಗ ನೀಡಲಾಗುತ್ತಿದೆ. ಈ ಉತ್ಪನ್ನಗಳನ್ನು ಭಾರತದಲ್ಲಿ ಉತ್ಪಾದಿಸಲಾಗಿದ್ದು, ಜಗತ್ತಿನಾದ್ಯಂತ ವ್ಯಾಪಿಸಲು ಸಜ್ಜಾಗಿರುವ ಕಂಪನಿಯನ್ನು ಉತ್ತೇಜಿಸಲು ನಿಂತಿರುವ ಹೂಡಿಕೆದಾರರನ್ನು ಸೇರಲು ನನಗೆ ಹೆಮ್ಮೆಯಾಗುತ್ತಿದೆ,” ಎಂದು ಆಲಿಯಾ ತಿಳಿಸಿದ್ದಾರೆ.
ಕೋವಿಡ್ 19 ಗ್ರಾಫ್ ಕುರಿತಂತೆ ಆತಂಕಕಾರಿ ಮಾಹಿತಿ ಹೊರ ಹಾಕಿದ ಕೇಂದ್ರ ಸಚಿವಾಲಯ
ಹೂ ಮರುಬಳಕೆ ತಂತ್ರಜ್ಞಾನದ ಮೂಲಕ ’ಫ್ಲೆದರ್’ ಅನ್ನು ಸಹ ಕಂಪನಿ ಅಭಿವೃದ್ಧಿಪಡಿಸಿದ್ದು, ಇದು ಪ್ರಾಣಿಜನ್ಯ ಚರ್ಮಕ್ಕೆ ಪರ್ಯಾಯವಾಗಿದ್ದು, ಅತ್ಯುತ್ತಮ ಸಸ್ಯಹಾರಿ ಸಂಶೋಧನೆ ಎಂದು ಪೇಟಾದಿಂದ ಪುರಸ್ಕರಿಸಲ್ಪಟ್ಟಿದೆ.
ಇದಕ್ಕೂ ಮುನ್ನ ಸ್ಯಾನ್ ಫ್ರಾನ್ಸಿಸ್ಕೋದ ಐಎಎನ್ ಫಂಡ್, ಸೋಷಿಯಲ್ ಆಲ್ಫಾ (ಫೈಸ್) ಹಾಗೂ ಡ್ರೇಪರ್ ರಿಚರ್ಡ್ಸ್ ಕಪ್ಲನ್ ಪ್ರತಿಷ್ಠಾನದಿಂದ ಫೂಲ್ ಎರಡು ದಶಲಕ್ಷ ಡಾಲರ್‌ಗಳನ್ನು ಸಂಗ್ರಹಿಸಿದೆ.
ಆರ್ಯನ್ ಪರ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ಹೃತಿಕ್ಗೆ ಟಾಂಗ್ ಕೊಟ್ಟ ಕಂಗನಾ
“ಆಲಿಯಾರ ಹೂಡಿಕೆಯು, ಮೂರನೇ ಸ್ತರದ ನಗರದಿಂದ ಜಾಗತಿಕ ಯಶಸ್ಸು ಸಾಧಿಸುವತ್ತ ಹೆಜ್ಜೆ ಹಾಕಿರುವ ನಮ್ಮ ಪರಿಶ್ರಮಕ್ಕೆ ಉತ್ತೇಜನ ಕೊಟ್ಟಂತಾಗಿದೆ. ಈ ಹೂಡಿಕೆಯು ನಮ್ಮ ಹೆಜ್ಜೆಗುರುತುಗಳನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿ, ಸಂಶೋಧನೆ ಮತ್ತು ಅಭಿವೃದ್ಧಿಯ ಕೆಲಸವನ್ನು ಚುರುಕುಗೊಳಿಸಲು ನೆರವಾಗಲಿದೆ,” ಎಂದು ಅಂಕಿತ್ ತಿಳಿಸಿದ್ದಾರೆ.