ಮುಸ್ಲಿಮರು ಪವಿತ್ರ ರಂಜಾನ್ ತಿಂಗಳಿನಲ್ಲಿ ವಿಶೇಷ ತರಾವೀಹ್ ಪ್ರಾರ್ಥನೆಗಳನ್ನು ಪಠಿಸುತ್ತಾರೆ. ಹಲವಾರು ಪುರುಷರು ಪ್ರಾರ್ಥನೆಯೊಂದಿಗೆ ಅಲ್ಲಾಹನನ್ನು ಆರಾಧಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆದರೆ ಇಲ್ಲೊಂದು ವಿಶೇಷ ನಡೆದಿದೆ. ಅದೇನೆಂದರೆ ಪ್ರಾರ್ಥನೆ ಸಲ್ಲಿಸುವಾಗ ವಿಶೇಷ ಅತಿಥಿಯ ಆಗಮನವಾಗಿದೆ. ಅದು ಬೆಕ್ಕು. ಮುದ್ದಾದ ಬೆಕ್ಕೊಂದು ಮಸೀದಿಯ ಆವರಣದಲ್ಲಿ ಪ್ರವೇಶಿಸಿದೆ. ಅಲ್ಲಿ ಸಾಮೂಹಿಕ ಪೂಜೆಯನ್ನು ಮುನ್ನಡೆಸುವ ಇಮಾಮ್ ಮೈಮೇಲೆ ಹಾರಿದೆ.
ಉತ್ತರ ಆಫ್ರಿಕಾದ ಅಲ್ಜೀರಿಯಾದ ಬೋರ್ಡ್ಜ್ ಬೌ ಅರೆರಿಡ್ಫ್‌ನಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೆಕ್ಕು ಬಹುಶಃ ಅವರು ಸಾಕಿರುವಂತೆ ಕಾಣುತ್ತದೆ. ಆದ್ದರಿಂದ ಅವರು ವಿಚಲಿತರಾಗಿಲ್ಲ. ಬೆಕ್ಕು ಅವರ ಹೆಗಲ ಮೇಲೆ ಕುಳಿತುಕೊಂಡು ಅವರನ್ನು ಪ್ರೀತಿಯಿಂದ ಮುತ್ತಿಕ್ಕಿದ್ದಂತೆ ಕಾಣಿಸುತ್ತದೆ. ಅವರೂ ಕೂಡ ಪ್ರಾರ್ಥನೆ ಸಲ್ಲಿಸುತ್ತಲೇ ಬೆಕ್ಕಿನ ಮೈಯನ್ನು ನೇವರಿಸಿದ್ದಾರೆ. ಈ ಕ್ಯೂಟ್ ವಿಡಿಯೋಗೆ ನೆಟ್ಟಿಗರು ಥರಹೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ.