ಈಗಾಗಲೇ ತನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜೀವ ನಿರ್ದೇಶನದ ‘ಅಲೆಕ್ಸಾ’ ಸಿನಿಮಾ ಜನವರಿ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಅದಿತಿ ಪ್ರಭುದೇವ ತಮ್ಮ instagram ಖಾತೆಯಲ್ಲಿ ಈ ಚಿತ್ರದ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ನಿಮ್ಮ ಪ್ರೀತಿ, ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾರೆ.
ಈ ಸಿನಿಮಾವನ್ನು ಶ್ರೀ ಭುವನೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಂದ್ರು ನಿರ್ಮಾಣ ಮಾಡಿದ್ದು, ಪವನ್ ತೇಜ ಮತ್ತು ಆದಿತಿ ಪ್ರಭುದೇವ ಸೇರಿದಂತೆ ಮೇಘಶ್ರೀ, ನಾಗಾರ್ಜುನ್, ಹನುಮಂತೇಗೌಡ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ತೆರೆಹಂಚಿಕೊಂಡಿದ್ದಾರೆ. ಉಮೇಶ್ ಆರ್ ಬಿ ಸಂಕಲನವಿದ್ದು, ಸಾಯಿ ಸತೀಶ್ ಛಾಯಾಗ್ರಹಣವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.