alex Certify Big News: ಅಧ್ಯಯನದಲ್ಲಿ ಬಯಲಾಯ್ತು ಭಾರತೀಯರ ‘ಎತ್ತರ’ದ ಕುರಿತಾದ ಶಾಕಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಅಧ್ಯಯನದಲ್ಲಿ ಬಯಲಾಯ್ತು ಭಾರತೀಯರ ‘ಎತ್ತರ’ದ ಕುರಿತಾದ ಶಾಕಿಂಗ್‌ ಸಂಗತಿ

ಭಾರತೀಯರ ದೈಹಿಕ ಎತ್ತರದಲ್ಲಿ ಕುಂಠಿತ ಕಂಡುಬಂದಿದೆ. ʼಭಾರತದಲ್ಲಿ ವಯಸ್ಕರ ಎತ್ತರದ ಪ್ರವೃತ್ತಿಗಳು: ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯಿಂದ ಪುರಾವೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಸಲಾದ ಅಧ್ಯಯನದಲ್ಲಿ 1998 ರಿಂದ 2015ರವರೆಗೆ ಭಾರತೀಯ ವಯಸ್ಕರ ಎತ್ತರವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಭಾರತದಲ್ಲಿ 2005-06 ರಿಂದ 2015-16ರವರೆಗೆ ವಯಸ್ಕರ ಪುರುಷರು ಹಾಗೂ ಮಹಿಳೆಯರ ಸರಾಸರಿ ಎತ್ತರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಅದರಲ್ಲೂ ಬಡ ವರ್ಗದ ಹಾಗೂ ಬುಡಕಟ್ಟು ಜನಾಂಗದ ಮಹಿಳೆಯರ ಎತ್ತರದಲ್ಲಿ ತೀವ್ರ ಕುಸಿತ ಉಂಟಾಗಿದೆ.

BDA ಉಚಿತ ನಿವೇಶನ ಹಂಚಿಕೆ: ಹುತಾತ್ಮ ಯೋಧರ ಕುಟುಂಬಕ್ಕೆ ಸೈಟ್ ಹಕ್ಕುಪತ್ರ ವಿತರಣೆ

ಭಾರತೀಯರಲ್ಲಿ ಕಂಡು ಬಂದ ಈ ವಿಚಾರವಾಗಿ ಜಾಗತಿಕ ಪ್ರವೃತ್ತಿಗೆ ವಿರೋಧವಾಗಿದೆ. ಏಕೆಂದರೆ ಈ ಹಿಂದೆ ನಡೆಸಲಾದ ಸಾಕಷ್ಟು ಅಧ್ಯಯನಗಳಲ್ಲಿ ವಿಶ್ವದಲ್ಲಿ ಜನರ ಎತ್ತರ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿತ್ತು. ಇಡೀ ವಿಶ್ವದಲ್ಲೇ ಮನುಷ್ಯನ ಎತ್ತರದಲ್ಲಿ ಏರಿಕೆ ಕಂಡುಬರ್ತಿರುವ ಸಂದರ್ಭದಲ್ಲಿ ಭಾರತೀಯರ ಎತ್ತರದಲ್ಲಿ ಇಳಿಕೆ ಕಾಣುತ್ತಿರುವುದು ನಿಜಕ್ಕೂ ಒಂದು ಆಘಾತಕಾರಿ ಸಂಗತಿಯಾಗಿದೆ ಎಂದು ಅಧ್ಯಯನದ ಲೇಖಕರು ಕಳವಳ ವ್ಯಕ್ತಪಡಿಸಿದ್ದಾರೆ.

ಕೊರಿಯೋಗ್ರಾಫರ್​ ಗೆ ಚಿನ್ನದ ಹುಡುಗ ನೀರಜ್​ ಚೋಪ್ರಾ ಪ್ರೇಮ ನಿವೇದನೆ…! ನೆಟ್ಟಿಗರಿಂದ ಫನ್ನಿ ರಿಯಾಕ್ಷನ್

ಇನ್ನೊಂದು ಆಘಾತಕಾರಿ ವಿಚಾರವೆಂದರೆ ಎತ್ತರದ ವಿಚಾರದಲ್ಲಿ ಆನುವಂಶಿಕ ಅಲ್ಲದ ವಿಚಾರಗಳೂ ಕೂಡ ಮಹತ್ವದ ಪಾತ್ರ ವಹಿಸಿದೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ. ಅಂದರೆ ಜೀವನಶೈಲಿ, ಪೋಷಕಾಂಶಗಳು. ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳು ಹೀಗೆ ಅನೇಕ ಅಂಶಗಳು ಮನುಷ್ಯನ ಎತ್ತರದ ಮೇಲೆ ಪರಿಣಾಮ ಬೀರ್ತಿದೆ.

ಅಧ್ಯಯನದಲ್ಲಿ ದೇಶಾದ್ಯಂತ ವಿವಿಧ ವ್ಯಕ್ತಿಗಳ ಎತ್ತರವನ್ನು ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ 15-20 ವರ್ಷ ವಯಸ್ಸಿನವರ ಎತ್ತರದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.

ಮಹಿಳೆಯರಲ್ಲಿ ಸರಾಸರಿ ಎತ್ತರದಲ್ಲಿ 0.42 ಸೆಂಟಿ ಮೀಟರ್​ ಇಳಿಮುಖವಾಗಿದೆ. ಹಾಗೂ ಪುರುಷರಲ್ಲಿ 1.10 ಸೆಂಟಿಮೀಟರ್​ ಸರಾಸರಿ ಇಳಿಕೆ ಕಂಡುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...