ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಈ ವಿಚಾರವನ್ನು ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅರುಣಾ ಭಾಟಿಯಾರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮುಂಬೈನ ಹಿರಾನಂದಾನಿ ಆಸ್ಪತ್ರೆಯಲ್ಲಿ ಅರುಣಾರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಇಂದು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ತಾಯಿ ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಗ್ಗೆ ಈ ಲೋಕವನ್ನು ಬಿಟ್ಟು ತೆರಳಿದ್ದಾರೆ. ತನ್ನ ತಂದೆಯ ಜೊತೆ ಇನ್ನೊಂದು ಲೋಕದಲ್ಲಿ ಬದುಕಲು ತೆರಳಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆಯನ್ನು ನಾನು ಗೌರವಿಸುತ್ತೇನೆ ಎಂದು ನಟ ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.
ತಮ್ಮ ಮುಂಬರುವ ಸಿನಿಮಾ ʼಸಿಂಡರೆಲ್ಲಾʼ ಶೂಟಿಂಗ್ಗಾಗಿ ಬ್ರಿಟನ್ನಲ್ಲಿದ್ದ ಅಕ್ಷಯ್ ಕುಮಾರ್ ತಾಯಿಯ ಅನಾರೋಗ್ಯ ಸುದ್ದಿ ಕೇಳುತ್ತಿದ್ದಂತೆಯೇ ಭಾರತಕ್ಕೆ ವಾಪಸ್ಸಾಗಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಹೇಳಿಕೊಂಡಿದ್ದ ಅಕ್ಷಯ್ ಕುಮಾರ್ ನಮ್ಮ ಕುಟುಂಬ ಕಠಿಣ ಸಮಯವನ್ನು ಕಳೆಯುತ್ತಿದೆ ಎಂದೂ ಹೇಳಿಕೊಂಡಿದ್ದರು. ನಿಮ್ಮೆಲ್ಲರ ಪ್ರಾರ್ಥನೆ ನಮ್ಮ ಕುಟುಂಬಕ್ಕೆ ಸಹಾಯ ಮಾಡಲಿದೆ ಎಂದಿದ್ದರು.
https://www.instagram.com/p/CTi9v8ToZ-d/?utm_source=ig_web_copy_link
https://www.instagram.com/p/CThUAHsNcTS/?utm_source=ig_web_copy_link