1990ರ ದಶಕದ ಬಾಲಿವುಡ್ ಫ್ಯಾನ್ಗಳಲ್ಲಿರುವ ಸಾಮಾನ್ಯವಾದ ಮಿಥ್ಯೆಯೊಂದಕ್ಕೆ ಸ್ಪಷ್ಟನೆ ಕೊಟ್ಟ ನಟ ಅಕ್ಷಯ್ ಕುಮಾರ್, ತಾವು ಎಂದಿಗೂ ಕುಸ್ತಿ ಪಟು ದಿ ಅಂಡರ್ಟೇಕರ್ ಜೊತೆಗೆ ಸೆಣಸಾಡಿರಲಿಲ್ಲ ಎಂದಿದ್ದಾರೆ.
ಶ್ವಾನದ ಹೊಟ್ಟೆ ಸೇರಿದ್ದ ಮಾಸ್ಕ್ ಹೊರತೆಗೆದ ವೈದ್ಯರು…!
ತಮ್ಮ ಚಿತ್ರ ’ಖಿಲಾಡಿಯೋಂ ಕಾ ಖಿಲಾಡಿ’ ಬಿಡುಗಡೆಯಾಗಿ 25 ವರ್ಷಗಳು ಕಳೆದ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ಅಕ್ಷಯ್ ಕುಮಾರ್, “ನಾಳೆಗೆ #KhiladiyonKaKhiladi ಬಿಡುಗಡೆಯಾಗಿ 25 ವರ್ಷಗಳು ತುಂಬಲಿದ್ದು, ತಮಾಷೆಯಾದ ವಿಚಾರವೊಂದನ್ನು ಹೇಳಲು ಇಚ್ಛಿಸುವೆ: ಚಿತ್ರದಲ್ಲಿ ಅಂಡರ್ಟೇಕರ್ ಪಾತ್ರ ಮಾಡಿದ ಕುಸ್ತಿಪಟು ಬ್ರಿಯಾನ್ ಲೀ” ಎಂದಿದ್ದಾರೆ.
ಜಾನಿ ಲಿವರ್ ಪುತ್ರಿ ಪ್ರತಿಭೆಗೆ ಮಾರುಹೋದ ನೆಟ್ಟಿಗರು
1996ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ರೇಖಾ ಹಾಗೂ ರವೀನಾ ಟಂಡನ್ ನಟಿಸಿದ್ದಾರೆ. ಸಾಮಾನ್ಯವಾಗಿ ಸಾಹಸದ ದೃಶ್ಯಗಳಿಂದಲೇ ಹೆಸರು ಮಾಡುವ ಅಕ್ಷಯ್ ಕುಮಾರ್ಗೆ ಈ ಚಿತ್ರದಲ್ಲಿನ ಕುಸ್ತಿಯ ದೃಶ್ಯ ಇನ್ನಷ್ಟು ಖ್ಯಾತಿ ತಂದುಕೊಟ್ಟಿತ್ತು.
ಚಿತ್ರದಲ್ಲಿ ಅಕ್ಷಯ್ ಖುದ್ದು ʼದಿ ಅಂಡರ್ಟೇಕರ್ʼ ಜೊತೆಗೆ ಕುಸ್ತಿ ಮಾಡಿದ್ದಾರೆ ಎಂದೇ ಅವರ ಅಭಿಮಾನಿಗಳು ನಂಬಿದ್ದರು.
https://twitter.com/Dont__Mess/status/1404005394163273734?ref_src=twsrc%5Etfw%7Ctwcamp%5Etweetembed%7Ctwterm%5E1404005394163273734%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fakshay-kumar-the-undertaker-wrestling-khiladiyon-ka-khiladi-25-years-twitter-meme-3842195.html
https://twitter.com/nrcexe/status/1404004282026713090?ref_src=twsrc%5Etfw%7Ctwcamp%5Etweetembed%7Ctwterm%5E1404004282026713090%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fakshay-kumar-the-undertaker-wrestling-khiladiyon-ka-khiladi-25-years-twitter-meme-3842195.html