
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮಡದಿ ಟ್ವಿಂಕಲ್ ಖನ್ನಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣವೊಂದರಲ್ಲಿ ಕಾವ್ಯಾತ್ಮಕವಾದ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಮಡದಿಯೊಂದಿಗೆ ಚಿಲ್ ಮಾಡುತ್ತಿರುವ ತಮ್ಮ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ನಟ, “ನೀನು ನನ್ನೊಂದಿಗೆ ಇದ್ದರೆ ಯಾವುದೇ ನೋವನ್ನೂ ನನ್ನೊಂದಿಗೆ ಕೊಂಡೊಯ್ಯಲು ಸಮರ್ಥನಾಗಿರುವೆ….. ಹುಟ್ಟುಹಬ್ಬದ ಶುಭಾಶಯಗಳು ಟೀನಾ,” ಎಂದು ಬರೆದಿದ್ದಾರೆ.
ಕತ್ರಿನಾ ಹಳದಿ ಶಾಸ್ತ್ರದ ಪೋಟೊ ಹಂಚಿಕೊಂಡ ಸಹೋದರಿ
ಮಾಲ್ಡೀವ್ಸ್‌ನ ಕಡಲ ತೀರದ ಶುಭ್ರ ನೀರಿನ ಮೇಲೆ ಹ್ಯಾಮ್ಮಾಕ್ ಒಂದರ ಮೇಲೆ ಅಕ್ಷಯ್ ಹಾಗೂ ಟ್ವಿಂಕಲ್ ಕುಳಿತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.
ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು ಎಂದೇ ಪರಿಗಣಿತರಾಗಿರುವ ತಮ್ಮ ತಂದೆ ರಾಜೇಶ್ ಖನ್ನಾ ಜನಿಸಿದ ದಿನದಂದೇ ಟ್ವಿಂಕಲ್ ಜನಿಸಿದ್ದಾರೆ.