alex Certify ಕತ್ರಿನಾ ಹಳದಿ ಶಾಸ್ತ್ರದ ಪೋಟೊ ಹಂಚಿಕೊಂಡ ಸಹೋದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ರಿನಾ ಹಳದಿ ಶಾಸ್ತ್ರದ ಪೋಟೊ ಹಂಚಿಕೊಂಡ ಸಹೋದರಿ

ಕತ್ರೀನಾ ಕೈಫ್ ತಂಗಿ, ಇಸಾಬೆಲ್ ಕೈಫ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಅರಿಷಿಣ ಸಮಾರಂಭದ ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕತ್ರೀನಾ ಸಹೋದರಿಯರಾದ ಸ್ಟೆಫನಿ, ಕ್ರಿಸ್ಟೀನ್, ನತಾಶ, ಮೆಲಿಸ್ಸಾ ಮತ್ತು ಸೋನಿಯಾ ಎಲ್ಲರು ಹಳದಿ ಬಟ್ಟೆಗಳನ್ನ ತೊಟ್ಟು ಮಿಂಚಿದ್ದಾರೆ. ಚಿತ್ರಗಳನ್ನ ಹಂಚಿಕೊಂಡಿರುವ ಇಸಾಬೆಲ್ ನೆನಪುಗಳು ಅನ್ನೋ ಚಿಕ್ಕ ಕ್ಯಾಪ್ಷನ್ ನೀಡಿದ್ದಾರೆ.

BIG NEWS: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಬಿ.ವೈ. ವಿಜಯೇಂದ್ರ ಸೇರಿ ಹೊಸ ಟೀಂ, ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್

ಇದಕ್ಕೂ ಮುಂಚೆ ಇಸಾಬೆಲ್ ಕೈಫ್ ಕತ್ರಿನಾ ಮತ್ತು ವಿಕ್ಕಿಯ ವಿವಾಹದ ಚಿತ್ರಗಳನ್ನು ಹಂಚಿಕೊಂಡಿದ್ದು, ಅಲ್ಲಿ ಅವರು ಮತ್ತು ಅವರ ಸಹೋದರಿಯರು ಕತ್ರಿನಾಳನ್ನು ಹಜಾರದಿಂದ ಮಂಟಪದವರೆಗೆ ಕರೆದುಕೊಂಡು ಹೋಗುವ ಶಾಸ್ತ್ರದ ಫೋಟೊಗಳನ್ನ ಪೋಸ್ಟ್ ಮಾಡಿದ್ದರು.

ಈ ಚಿತ್ರಗಳಿಗೆ “ಪರಿವಾರ್ ಹೈ , ಸಬ್ ಕುಚ್ ಹೈ(ಕುಟುಂಬ ಒಂದಿದ್ದರೆ, ಎಲ್ಲವು ಇದ್ದಂತೆ) ಎಂದು ಹಿಂದಿಯಲ್ಲೇ ಶೀರ್ಷಿಕೆ ನೀಡಿದ್ದರು. ಅದೇ ಚಿತ್ರಗಳನ್ನು ಕತ್ರಿನಾ ಕೈಫ್ ಹಂಚಿಕೊಂಡು, ಆ ಪೋಸ್ಟ್ ಅನ್ನು ತಮ್ಮ ಸಹೋದರಿಯರಿಗೆ ಅರ್ಪಿಸಿದ್ದರು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್, ಡಿಸೆಂಬರ್ 9 ರಂದು ರಾಜಸ್ಥಾನದ, ಮಾಧೋಪುರದಲ್ಲಿರುವ ಫೋರ್ಟ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...