alex Certify ಬೀಟಲ್ಸ್‌ ಬ್ಯಾಂಡ್‌ನ ನಿಕಟವರ್ತಿ ಈ ಸರ್ದಾರ್‌ಜೀ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಟಲ್ಸ್‌ ಬ್ಯಾಂಡ್‌ನ ನಿಕಟವರ್ತಿ ಈ ಸರ್ದಾರ್‌ಜೀ

ಅರ್ಧ ಶತಮಾನದನ ಹಿಂದೆ ರಿಶಿಕೇಷಕ್ಕೆ ಭೇಟಿ ಕೊಟ್ಟಿದ್ದ ಬೀಟಲ್ಸ್ ತಂಡದ ಸದಸ್ಯರೊಂದಿಗೆ ಅವಿನಾಭಾವ ನಿಕಟತೆ ಬೆಳೆಸಿಕೊಂಡಿದ್ದ ವಾದ್ಯೋಪಕರಣಗಳ ಅಂಗಡಿ ಮಾಲೀಕ ಅಜಿತ್‌ ಸಿಂಗ್ ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

1968ರಲ್ಲಿ ಫ್ಯಾಬ್ ಫೋರ್‌ ಖ್ಯಾತಿಯ ಜಾನ್ ಲೆನ್ನನ್, ಪೌಕ್ ಮೆಕ್‌ಕಾರ್ಟೆನಿ, ಜಾರ್ಜ್‌ ಹ್ಯಾರಿಸನ್ ಹಾಗೂ ರಿಂಗೋ ಸ್ಟಾರ್‌‌ ಉತ್ತರಾಖಂಡದ ರಿಶಿಕೇಷ ಜಿಲ್ಲೆಯಲ್ಲಿರುವ ಮಹರ್ಷಿ ಮಹೇಶ್ ಯೋಗಿಜೀರ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರು. ಗಂಗಾ ನದಿಯ ತಟದಲ್ಲಿ ಆಧ್ಯಾತ್ಮದ ಧ್ಯಾನದಲ್ಲಿ ಆಗಮಿಸಿದ್ದ ಈ ನಾಲ್ವರು ಸರ್ದಾರ್‌ ಅಜಿತ್‌ ಸಿಂಗ್‌ರ ವಾದ್ಯೋಪಕರಣಗಳ ಅಂಗಡಿಗೆ ಭೇಟಿ ಕೊಟ್ಟಿದ್ದರು.

ಆ ವೇಳೆ ನಾದಲೋಕದ ದಂತಕಥೆಗಳ ವಾದ್ಯೋಪಕರಣಗಳಿಗೆ ರಿಪೇರಿ ಮಾಡಿಕೊಟ್ಟಿದ್ದ ಸಿಂಗ್, ಅವರನ್ನು ಚಹಾ ಕುಡಿಯಲು ಮನೆಗೆ ಆಹ್ವಾನಿಸಿದ್ದರು. ತಮ್ಮ ಆ ದಿನಗಳ ಅನುಭವವನ್ನು ಸಿಂಗ್ 2019ರಲ್ಲಿ ಮಾಧ್ಯಮವೊಂದರ ಜೊತೆಗೆ ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...