alex Certify ಕಣ್ಮನ ಸೆಳೆದ ಬಾಲಿವುಡ್ ನಟಿ ಐಶ್ವರ್ಯಾ ರೈ ರ್ಯಾಂಪ್ ವಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮನ ಸೆಳೆದ ಬಾಲಿವುಡ್ ನಟಿ ಐಶ್ವರ್ಯಾ ರೈ ರ್ಯಾಂಪ್ ವಾಕ್

ಪ್ಯಾರಿಸ್ ಫ್ಯಾಶನ್ ವೀಕ್‌ ‘ಟ್ರೆಡಿಶನ್ ಮೀಟ್ಸ್ ಮಾಡರ್ನ್’ನಲ್ಲಿ ಪಾಲ್ಗೊಂಡ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಎಲ್ಲರ ಗಮನ ಸೆಳೆದಿದ್ದಾರೆ.
ಅಕ್ಟೋಬರ್ 3 ರಂದು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್, ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಕಾಸ್ಮೆಟಿಕ್ ಬ್ರ್ಯಾಂಡ್‌ಗಾಗಿ ಸಂಪೂರ್ಣ ಬಿಳಿ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಾ ಬರುತ್ತಿದ್ದಂತೆ ನೆರೆದಿದ್ದವರ ದೃಷ್ಟಿಯೆಲ್ಲಾ ಐಶ್ವರ್ಯಾ ಮೇಲಿತ್ತು.

ನಟರಾದ ಹೆಲೆನ್ ಮಿರ್ರೆನ್, ಕ್ಯಾಥರೀನ್ ಲ್ಯಾಂಗ್‌ಫೋರ್ಡ್, ಗಾಯಕಿ ಕ್ಯಾಮಿಲಾ ಕ್ಯಾಬೆಲ್ಲೊ ಮತ್ತು ಅಂಬರ್ ಹರ್ಡ್ ಸೇರಿದಂತೆ ಹೆಸರಾಂತ ತಾರೆಯರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

‘ಜೀವನದೊಂದಿಗೆ ಜೀವವೂ ಮುಖ್ಯ…’; ಎಲ್ಲರನ್ನು ಆಕರ್ಷಿಸಿದ ಸಿಎಂ ದಸರಾ ಸಂದೇಶ

ಕಾರ್ಯಕ್ರಮದ ಕೆಲವು ತುಣುಕುಗಳನ್ನು ಲೋರಿಯಲ್ ಪ್ಯಾರಿಸ್ ನ ಅಧಿಕೃತ ಇನ್ಸ್ಟಾಗ್ರಾಂ ಹ್ಯಾಂಡಲ್ ಹಂಚಿಕೊಂಡಿದೆ. ಐಶ್ವರ್ಯಾ ರ್ಯಾಂಪ್ ವಾಕ್ ಮಾಡುತ್ತಿರುವ ಸುಂದರ ದೃಶ್ಯದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇನ್ನೊಂದು ಚಿತ್ರದಲ್ಲಿ ಹೆಲೆನಾ ಅವರ ಕೈ ಹಿಡಿದು ಐಶ್ವರ್ಯಾ ನಗೆಬೀರಿದ್ದರೆ, ಮತ್ತೊಬ್ಬ ನಟಿ ಚಪ್ಪಾಳೆ ಬಾರಿಸುತ್ತಿರುವ ಫೋಟೋವನ್ನು ಕೂಡ ಹಂಚಿಕೊಳ್ಳಲಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...