ಹೆಣ್ಮಕ್ಕಳಿಗೆ ಪಾನಿಪೂರಿ ಇಷ್ಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿಗಳು ಅಂದ್ರೆ ಹೆಣ್ಣಕ್ಕಳು ಜೀವ ಬಿಡ್ತಾರೆ.
ಇನ್ಸ್ಟಾಗ್ರಾಂನಲ್ಲಿ ಸದ್ಯ ಪಾನಿಪುರಿಯದ್ದೇ ಮಾತು..! ಈ ರೀತಿ ಆಗೋಕೆ ಕಾರಣ ವೈರಲ್ ಆಗಿರುವ ಈ ವಿಡಿಯೋ. ವಧು – ವರ ಫೋಷಾಕಿನಲ್ಲೇ ಇರುವ ಹೊಸ ಜೋಡಿಯೊಂದು ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ನೇರವಾಗಿ ಪಾನಿಪುರಿ ಸ್ಟಾಲ್ಗೆ ಭೇಟಿ ನೀಡಿದೆ. ಹಾಗೂ ವರ ಪ್ರೀತಿಯಿಂದ ತನ್ನ ಪತ್ನಿಗೆ ಪಾನಿಪುರಿಯನ್ನ ತಿನ್ನಿಸಿದ್ದಾರೆ.
ಮದುವೆಗೆ ಒಂದು ತೂಕ ಅಂದ್ರೆ.. ಪಾನಿಪುರಿಗೇ ಇನ್ನೊಂದು ತೂಕ ಎಂಬರ್ಥದಲ್ಲಿ ವಿಡಿಯೋಗೆ ಶೀರ್ಷಿಕೆಯನ್ನ ನೀಡಲಾಗಿದೆ. ಈ ವಿಡಿಯೋ 2 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದ್ದು ಪತಿ ಇದಕ್ಕಿಂತ ವಿಶೇಷವಾಗಿ ತನ್ನ ಪತ್ನಿಗೆ ಇನ್ನೇನನ್ನು ನೀಡಲು ಸಾಧ್ಯ ಎಂದು ನೆಟ್ಟಿಗರು ಸಂತೋಷ ವ್ಯಕ್ತಪಡಿಸ್ತಾ ಇದ್ದಾರೆ.
https://youtu.be/8fQdRn8xQqQ