ಭಾರ್ತಿ ಏರ್ ಟೆಲ್ ಇದೀಗ `ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್ಸ್’ ವೈಶಿಷ್ಟ್ಯತೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಮಾದರಿಯಲ್ಲಿ ಇನ್ನು ಮುಂದೆ ಏರ್ ಟೆಲ್ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇನ್ನೊಂದು ಕರೆಯಲ್ಲಿ ನಿರತರಾಗಿದ್ದರೆ ಅಥವಾ ಸಿಮ್ ನೆಟ್ವರ್ಕ್ ವ್ಯಾಪ್ತಿಯಿಂದ ಹೊರಗಿದ್ದರೆ ಮಿಸ್ಡ್ ಕಾಲ್ ಬಗ್ಗೆ ಬಳಕೆದಾರರಿಗೆ ಮಾಹಿತಿ ಬರುತ್ತದೆ.
ಈ ವೈಶಿಷ್ಟ್ಯತೆಯ ಸೇರ್ಪಡೆಯಿಂದಾಗಿ ಏರ್ ಟೆಲ್ ಬಳಕೆದಾರರು ಯಾವುದೇ ಕರೆಗಳು ತಪ್ಪಿತಲ್ಲಾ ಎಂದು ಚಿಂತೆ ಮಾಡುವ ಅಗತ್ಯವಿರುವುದಿಲ್ಲ.
ಈ ಸೌಲಭ್ಯವು ಪ್ರೀಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಲಭ್ಯವಿದೆ. ಈ ಸೌಲಭ್ಯವನ್ನು ಪಡೆಯಲು ಯಾವುದೇ ನಿಬಂಧನೆ ಇರುವುದಿಲ್ಲ.
ಮದುವೆ ಸಮಾರಂಭದಲ್ಲಿ ʼಕಾಲಾ ಚಶ್ಮಾʼ ಹಾಡಿಗೆ ಕುಣಿದು ಕುಪ್ಪಳಿಸಿದ ನಾರ್ವೆ ಡಾನ್ಸರ್ಸ್
ಇದುವರೆಗೆ ಗ್ರಾಹಕರ ಸ್ಮಾರ್ಟ್ ಫೋನ್ ಸ್ವಿಚ್ ಆಫ್ ಆಗಿದ್ದರೆ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದರೆ ಮತ್ತು ನಿಮಗೆ ಯಾರಾದರೂ ಕರೆ ಮಾಡಿದರೆ ನೀವು ಕರೆ ಅಥವಾ ಮೆಸೇಜನ್ನು ಸ್ವೀಕರಿಸುತ್ತಿರಲಿಲ್ಲ. ಆದರೆ, ಈಗ ನೀವು ಫೋನನ್ನು ಸ್ವಿಚ್ ಆನ್ ಮಾಡಿದಾಗ, ನೀವು ನೆಟ್ವರ್ಕ್ ಇರುವ ಪ್ರದೇಶಕ್ಕೆ ಬಂದಾಗ ಎಸ್ಎಂಎಸ್ ಮೂಲಕ ನೀವು ತಪ್ಪಿ ಹೋದ ಕರೆ ಬಗ್ಗೆ ಮಾಹಿತಿ ಪಡೆಯಲಿದ್ದೀರಿ.
ಇಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ರೋಮಿಂಗ್ ನಲ್ಲಿ ಇರುವ ಸಂದರ್ಭದಲ್ಲಿಯೂ ಈ ಸೇವೆಯನ್ನು ಪಡೆಯಬಹುದಾಗಿದೆ.