ಕಳೆದ 4-5 ವರ್ಷಗಳಿಂದ ಭಾರೀ ನೋವಿನಲ್ಲೇ ತನ್ನ ಸೇವೆಗಳ ಬೆಲೆಗಳಲ್ಲಿ ಭಾರೀ ಇಳಿಕೆ ಮಾಡಬೇಕಾಗಿ ಬಂದಿದ್ದ ಏರ್‌ಟೆಲ್ ಇದೀಗ ತನ್ನ ಎದುರಾಳಿ ರಿಲಾಯನ್ಸ್ ಜಿಯೋ ತನ್ನ ಸೇವೆಗಳ ಶುಲ್ಕಗಳಲ್ಲಿ ಬೆಲೆ ಏರಿಕೆ ಮಾಡಿರುವ ಕಾರಣದಿಂದ, ತಾನೂ ಸಹ ಬೆಲೆಗಳನ್ನು ಏರಿಸಿಕೊಂಡು ಹೋಗುತ್ತಿದೆ.
ಬೆಲೆಗಳಲ್ಲಿ ಹೆಚ್ಚಳದೊಂದಿಗೆ, ಗೂಗಲ್‌ನ ಹೂಡಿಕೆ ಹಾಗೂ ಇನ್ನಿತರ ಕಾರಣಗಳಿಂದ ಮೂರನೇ ತ್ರೈಮಾಸಿಕದಲ್ಲಿ ಉತ್ತಮ ವಿತ್ತೀಯ ಪ್ರದರ್ಶನ ತೋರಿದ ಬಳಿಕ ಏರ್‌ಟೆಲ್‌ನ ನಿರ್ವಹಣೆಯು ಮತ್ತೊಂದು ಬೆಲೆ ಏರಿಕೆಯ ಸೂಚನೆ ಕೊಟ್ಟಿದೆ. ಮುಂದಿನ 3-4 ತಿಂಗಳಲ್ಲಿ ಅಲ್ಲವಾದರೂ ಈ ವರ್ಷದಲ್ಲಿ ತನ್ನ ಸೇವೆಗಳ ರೇಟುಗಳು ಏರುವ ಅಂದಾಜನ್ನು ಏರ್‌ಟೆಲ್ ಕೊಟ್ಟಿದೆ.
ಹೀಗೂ ಪ್ರಪೋಸ್ ಮಾಡಬಹುದು..! ಗೆಳತಿಗೆ ಪ್ರೇಮ ನಿವೇದನೆ ಮಾಡಲು ಕೆಫೆ ಸಹಾಯ ಕೋರಿದ ವ್ಯಕ್ತಿ
ಪ್ರತಿ ಬಳಕೆದಾರನಿಂದ ಬರುವ ಸರಾಸರಿ ಆದಾಯ (ಎಆರ್‌ಪಿಯು) 2022ರಲ್ಲಿ 200 ರೂ.ಗಳಿಗೆ ಏರಿಸಿಕೊಳ್ಳುವ ಗುರಿಯನ್ನು ಏರ್‌ಟೆಲ್ ಹೊಂದಿದೆ.
ಬುಧವಾರದಂದು ಏರ್‌ಟೆಲ್ ಶೇರುಗಳ ಬೆಲೆಗಳಲ್ಲಿ 1.55% ಹೆಚ್ಚಳ ಕಂಡು ಬಂದಿದ್ದು, ಎನ್‌ಎಸ್‌ಇಯಲ್ಲಿ ಅದರ ಶೇರು ಬೆಲೆಯು 719.90 ರೂ./ಶೇರಿನಂತೆ ಆಗಿದೆ.
2020ರ ಡಿಸೆಂಬರ್ ತ್ರೈಮಾಸಿಕದಲ್ಲಿ 854 ಕೋಟಿ ರೂ.ಗಳ ಲಾಭ ಕಂಡಿದ್ದ ಏರ್‌ಟೆಲ್ ಕಳೆದ ಡಿಸೆಂಬರ್‌ನಲ್ಲಿ 830 ಕೋಟಿ ರೂ.ಗಳ ಲಾಭದೊಂದಿಗೆ ವರ್ಷದಿಂದ ವರ್ಷದ ಲೆಕ್ಕಾಚಾರದ ಲಾಭದಲ್ಲಿ 3% ಇಳಿಕೆ ಕಂಡಿದೆ. ಇದೇ ತ್ರೈಮಾಸಿಕದಲ್ಲಿ ಎಆರ್‌ಪಿಯು ಮಟ್ಟವು 163 ರೂ.ಗೆ ಏರಿದೆ.
ಇದೇ ವೇಳೆ, ಸಾಲದ ಬಾಂಡ್‌ಗಳು, ಭದ್ರತೆಗಳನ್ನು ವಿತರಿಸುವ ಮೂಲಕ 7,500 ಕೋಟಿ ರೂಪಾಯಿಗಳ ಸಾಲ ಕ್ರೋಢೀಕರಿಸಿಕೊಳ್ಳಲು ಕಂಪನಿಯ ಮಂಡಳಿ ನಿರ್ಧರಿಸಿದೆ.