ದೆಹಲಿಯ ವಾತಾವರಣ ತನ್ನ ಎಂದಿನ ಮಟ್ಟದ ಮಾಲಿನ್ಯಕ್ಕೆ ಮರಳುತ್ತಿರುವಂತೆಯೇ ರಾಜಧಾನಿಯಲ್ಲಿ ಗಾಳಿ ಶುದ್ಧ ಮಾಡುವ ಉಪಕರಣಗಳ ಮಾರಾಟದ ಭರಾಟೆ ಜೋರಾಗಿದೆ.
ದೀಪಾವಳಿಯ ಬಳಿಕ ಈ ಉಪಕರಣಗಳ ಮಾರಾಟದಲ್ಲಿ ತುರುಸು ಜೋರಾಗುವ ಕಾರಣ ಇವುಗಳ ಮಾರುಕಟ್ಟೆ ಗಾತ್ರವು 500 ಕೋಟಿ ರೂ.ಗಳ ಮೌಲ್ಯ ದಾಟಿದೆ. ದೇಶಾದ್ಯಂತ ಮಾರಾಟವಾಗುವ ವಾಯು ಶುದ್ಧೀಕರಣ ಉಪಕರಣಗಳ ಪೈಕಿ ಮುಕ್ಕಾಲು ಭಾಗ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದಲ್ಲೇ ಆಗುತ್ತವೆ.
ಶೀತ – ಕಫಕ್ಕೆ ಸೂಪರ್ ಮನೆ ಮದ್ದು: ಒಮ್ಮೆ ಈ ಔಷಧಿ ಉಪಯೋಗಿಸಿ ನೋಡಿ
ಈ ಮಾಸಕ್ಕೆ ಹೊಸ ಅವತರಣಿಕೆಗಳ ವಾಯು ಶುದ್ಧಕಗಳನ್ನು ಪರಿಚಯಿಸಿರುವ ಉತ್ಪಾದಕರು ಕೆಟ್ಟ ಗಾಳಿಯಿಂದ ಮಾತ್ರವಲ್ಲದೇ ಸಾರ್ಸ್ ಕೋವ್-2 ವೈರಾಣುಗಳಿಂದಲೂ ಸಹ ರಕ್ಷಣೆ ಒದಗಿಸುತ್ತವೆ.
ದೇಶಾದ್ಯಂತ ದೊಡ್ಡ ನಗರಗಳಲ್ಲಿ ವಾಯು ಶುದ್ಧಕಗಳ ಬಗ್ಗೆ ಗ್ರಾಹಕ ಅರಿವು ಹೆಚ್ಚುತ್ತಿರುವ ಜೊತೆಗೆ ಮಾಲಿನ್ಯ ಮಟ್ಟಗಳ ಕುರಿತಂತೆ ಸುದ್ದಿ ವಾಹಿನಿಗಳಲ್ಲಿ ಬಹಳಷ್ಟು ವರದಿಗಳು ಬಿತ್ತರಗೊಳ್ಳುತ್ತಿರುವ ಕಾರಣ ಈ ಉಪಕರಣಗಳ ಮಾರಾಟದಲ್ಲಿ ಭಾರೀ ಮಟ್ಟದ ಏರಿಕೆ ಕಂಡು ಬರುತ್ತಿದೆ.
15ಕ್ಕೂ ಹೆಚ್ಚಿನ ಬ್ರಾಂಡ್‌ಗಳಲ್ಲಿ ಸಿಗುವ ವಾಯು ಶುದ್ಧಕಗಳು 4,200 ರೂ.ಗಳಿಂದ 50,000 ರೂ.ಗಳವರೆಗೂ, ಗುಣಮಟ್ಟದ ಅನುಸಾರ ವಿವಿಧ ಮಟ್ಟದ ಬೆಲೆಗಳಲ್ಲಿ ಸಿಗುತ್ತವೆ.