ಯುನೈಸ್ ಚಂಡಮಾರುತವು ಬ್ರಿಟನ್ ಹಾಗೂ ಯೂರೋಪ್ ನಲ್ಲಿ ತೀವ್ರ ಹಾನಿಯುಂಟು ಮಾಡುತ್ತಿದೆ. ರಸ್ತೆಯಲ್ಲಿ ಜನರು ಓಡಾಡುವುದಕ್ಕು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಲಂಡನ್ ನಗರದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಆದರೀಗ ಇಂತಹ ವಿಷಮ ಪರಿಸ್ಥಿತಿಯಲ್ಲಿ ಏರ್ ಇಂಡಿಯಾದ ಭಾರತೀಯ ಪೈಲಟ್‌ಗಳು ಎರಡು ವಿಮಾನಗಳನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಬ್ರಿಟನ್‌ನ ರಾಜಧಾನಿ ಲಂಡನ್‌ನಲ್ಲಿರುವ ಹೀಥ್ರೂ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಆದರೆ ಚಂಡಮಾರುತದ ಕಾರಣ, ಹೀಥ್ರೂ ವಿಮಾನ ನಿಲ್ದಾಣವು ಫೆಬ್ರವರಿ 18 ರಂದು ನಿರ್ಜನವಾಗಿತ್ತು. ಗಾಳಿಯು ಎಷ್ಟು ಪ್ರಬಲವಾಗಿತ್ತೆಂದರೆ ಯಾವುದೇ ಪೈಲಟ್‌ಗೆ ಇಲ್ಲಿ ವಿಮಾನ ಇಳಿಸುವ ಅಥವಾ ಟೇಕ್ ಆಫ್ ಮಾಡುವ ಧೈರ್ಯವೇ ಇರಲಿಲ್ಲ. ಅಂತಹ ಸಮಯದಲ್ಲಿ ಭಾರತದ ಎರಡು ವಿಮಾನಗಳು ಲಂಡನ್ ತಲುಪಿವೆ.
BIG BREAKING: ನಂದಿಬೆಟ್ಟದಲ್ಲಿ ಅವಘಡ; ಟ್ರೆಕ್ಕಿಂಗ್ ಹೋಗಿ ಜಾರಿಬಿದ್ದ ಯುವಕ; ರಕ್ಷಣೆಗಾಗಿ ಮೊರೆ
ಏರ್ ಇಂಡಿಯಾ ವಿಮಾನಗಳ ಲ್ಯಾಂಡಿಂಗ್ ಅನ್ನು ಬಿಗ್ ಜೆಟ್ ಟಿವಿ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ. ಸಧ್ಯ ಭಾರತೀಯ ಪೈಲಟ್‌ಗಳ ಈ ಸಾಹಸದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಕಿರಣ್ ಬೇಡಿ ಸಹ ಈ ವಿಡಿಯೋವನ್ನು ಹಂಚಿಕೊಂಡು ಪೈಲಟ್‌ಗಳನ್ನು ಪ್ರಶಂಸಿಸಿದ್ದಾರೆ.
ಫೆಬ್ರವರಿ 18, ಅಂದರೆ ಕಳೆದ ಶುಕ್ರವಾರದಂದು ಏರ್ ಇಡಿಯಾ ವಿಮಾನಗಳು ಹೀಥ್ರೂ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಹೈದರಾಬಾದ್‌ನಿಂದ ಹಾರಿದ ಏರ್ ಇಂಡಿಯಾ ವಿಮಾನ AI-147 ಪೈಲಟ್ ಅಂಚಿತ್ ಭಾರದ್ವಾಜ್ ಆಗಿದ್ದರು. ಆದಿತ್ಯ ರಾವ್ ಅವರು ಗೋವಾದಿಂದ ಟೇಕ್ ಆಫ್ ಆಗಿದ್ದ ಏರ್ ಇಂಡಿಯಾ ವಿಮಾನ AI-145ನ ಪೈಲಟ್. ಇಬ್ಬರೂ ಪೈಲಟ್‌ಗಳು ಬಿರುಗಾಳಿ ಮಧ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ, ಸುರಕ್ಷಿತವಾಗಿ ವಿಮಾನಗಳನ್ನು ಲ್ಯಾಂಡಿಂಗ್ ಮಾಡಿ ದಾಖಲೆ ಬರೆದಿದ್ದಾರೆ.