alex Certify ಎಐ ಟೆಕ್ನಾಲಜಿಯಲ್ಲಿ ಮೂಡಿಬಂತು ಅತ್ಯದ್ಭುತ ಕಲಾಕೃತಿ : ಇದು ನಗರಗಳ ಭವಿಷ್ಯ​ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಐ ಟೆಕ್ನಾಲಜಿಯಲ್ಲಿ ಮೂಡಿಬಂತು ಅತ್ಯದ್ಭುತ ಕಲಾಕೃತಿ : ಇದು ನಗರಗಳ ಭವಿಷ್ಯ​ ಎಂದ ನೆಟ್ಟಿಗರು

ಸದ್ಯ ಎಐ ಫೋಟೋಗಳು ಭಾರೀ ಟ್ರೆಂಡಿಂಗ್​ನಲ್ಲಿವೆ. ಈಗಾಗಲೇ ಸಾಕಷ್ಟು ಎಐ ಆ್ಯಂಕರ್​ಗಳು, ಫೋಟೋಗಳನ್ನು ನಾವು ನೋಡಿದ್ದೇವೆ. ಇದೀಗ ಕಲಾವಿದ ಪ್ರತೀಕ್​ ಅರೋರಾ ಎಂಬವರು ಇದೇ ಎಐ ಟೆಕ್ನಾಲಜಿ ಬಳಸಿಕೊಂಡು ಮುಂಬೈನ ಆಕಾಶದ ಮೇಲೆ ಸುಂದರವಾದ ಕಲಾಕೃತಿ ರಚಿಸಿದ್ದಾರೆ.

ವಾಣಿಜ್ಯನಗರಿ ಮುಂಬೈನಲ್ಲಿ ಜೀವನ ಕಟ್ಟಿಕೊಳ್ಳೋಕೆ ಬರೋ ಅನೇಕರು ಇಲ್ಲಿಯ ಖಾಯಂ ನಿವಾಸಿಗಳಾಗಿಬಿಡ್ತಾರೆ. ಹೀಗಾಗಿ ಇಲ್ಲಿ ನಿಮಗೆ ಒಂದು ತುಂಡು ಜಾಗ ಸಿಗೋದು ಭಾರೀ ಕಷ್ಟ. ಈ ಪರಿಸ್ಥಿತಿಯ ನಡುವೆ ಪ್ರತೀಕ್​ ಅರೋರಾ ಆಕಾಶದಲ್ಲಿ ತೇಲುವ ಅಪಾರ್ಟ್​ಮೆಂಟ್​ ನ ಕಲಾಕೃತಿ ರಚಿಸಿದ್ದಾರೆ. ಇದು ಮುಂಬೈನ ಭವಿಷ್ಯವನ್ನು ಹೇಳ್ತಿದೆ ಅಂತಾ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಗಗನಕ್ಕೇರುತ್ತಿರುವ ಪ್ರಾಪರ್ಟಿ ಬೆಲೆಗಳು ಹಾಗೂ ಸ್ಥಳಾವಕಾಶದ ನಿರ್ಬಂಧಗಳಿಗೆ ಹೆಸರುವಾಸಿಯಾದ ಮುಂಬೈ, ಅನೇಕ ಸಮಯದಿಂದ ರಿಯಲ್​ ಎಸ್ಟೇಟ್​ ಆವಿಷ್ಕಾರದ ಕೇಂದ್ರವಾಗಿದೆ.

ಕಲಾಕೃತಿಯಲ್ಲಿ ತೋರಿಸಿರುವ ಮನೆಗಳು ಗಾಜಿನ ಕಿಟಕಿಗಳು ಮತ್ತು ಬಾಗಿಲುಗಳೊಂದಿಗೆ ಆಧುನಿಕ ಚೌಕಟ್ಟನ್ನು ಹೊಂದಿವೆ. ಆದರೆ ಅವೆಲ್ಲವೂ ಅಂತರಿಕ್ಷ ನೌಕೆಯಂತಹ ರಚನೆಯನ್ನು ಹೋಲುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...