ತಾನು ಲಂಡನ್ನ ದಂತ ವೈದ್ಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ 45 ವರ್ಷದ ವ್ಯಕ್ತಿಯೊಬ್ಬನಿಗೆ 75 ಸಾವಿರ ರೂಪಾಯಿ ವಂಚಿಸಿದ ಘಟನೆಯೊಂದು ವರದಿಯಾಗಿದೆ. ನಿರ್ಮಲಸಿಂಹ ವಘೇಲಾ ಎಂಬವರು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ವಘೇಲಾ ನೀಡಿರುವ ಮಾಹಿತಿಯ ಪ್ರಕಾರ, ಡಾ.ಕಲ್ಯಾಣ ಬೋಧನ್ ಎಂಬ ಹೆಸರಿನಲ್ಲಿ ಜೂನ್ ತಿಂಗಳಲ್ಲಿ ಫೇಸ್ಬುಕ್ ರಿಕ್ವೆಸ್ಟ್ ಒಂದು ಬಂದಿತ್ತು. ಆ ವ್ಯಕ್ತಿಯು ತಾನು ಲಂಡನ್ನಲ್ಲಿ ದಂತವೈದ್ಯನಾಗಿದ್ದೆನೆಂದು ಹೇಳಿಕೊಂಡಿದ್ದಾನೆ.
ಬಳಿಕ ಇಬ್ಬರೂ ಸೋಶಿಯಲ್ ಮೀಡಿಯಾ ವೇದಿಕೆಯ ಮೂಲಕ ಫ್ರೆಂಡ್ಸ್ ಆಗಿದ್ದರು. ಬೋಧನ್ ಮೆಸೆಂಜರ್ ಮೂಲಕ ವಘೇಲಾ ಬಳಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಕಲ್ಯಾಣ್ ತಾನು ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆಂದೂ ಇಲ್ಲಿ ವಾಸ್ತುಶಿಲ್ಪ ಕಲಾಕೃತಿ, ಆಭರಣ ಹಾಗೂ ಬಟ್ಟೆಗಳನ್ನು ಖರೀದಿಸುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಶಾಪಿಂಗ್ ಆಸೆಗೆ ವಘೇಲಾ ಬಳಿ ಸಹಾಯ ಕೇಳಿದ್ದಾನೆ.
ಸುಳ್ಳು ಪತ್ತೆ ಹಚ್ಚಲೆಂದೇ ಅಭಿವೃದ್ಧಿಯಾಗಿದೆ ಹೊಸ ತಂತ್ರಜ್ಞಾನ..!
ಸ್ವಲ್ಪ ದಿನಗಳ ಬಳಿಕ ಬ್ರಿಟೀಷ್ ಏರ್ವೇಸ್ ಟಿಕೆಟ್ ಫೋಟೋವನ್ನು ವಘೇಲಾಗೆ ಕಳುಹಿಸಿದ ಕಲ್ಯಾಣ್ ತಾನು ಆಗಸ್ಟ್ 4ರಂದು ಭಾರತಕ್ಕೆ ಬರುತ್ತಿರೋದಾಗಿ ಹೇಳಿದ್ದಾನೆ. ರಾಘವೇಂದ್ರ ಎಂಬವರು ವಘೇಲಾಗೆ ಕರೆ ಮಾಡಿ ಬೋಧನ್ ಭಾರತಕ್ಕೆ ಬಂದಿದ್ದಾನೆ. ಆದರೆ ತೆರಿಗೆ ಹಣ ಪಾವತಿ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದಾದ ಬಳಿಕ ವಘೇಲಾಗೆ ವಿಡಿಯೋ ಕಾಲ್ ಮಾಡಿದ ಬೋಧನ್ ನನಗೆ ಸಹಾಯದ ಅವಶ್ಯಕತೆ ಇದೆ ಎಂದಿದ್ದಾನೆ. ಮರಳಿ ಕೊಡುತ್ತೇನೆ ಎಂದು ಹೇಳಿ ವಘೇಲಾ ಬಳಿ 75 ಸಾವಿರ ರೂಪಾಯಿ ಹಣ ತೆಗೆದುಕೊಂಡಿದ್ದನು. ವಘೇಲಾ ಹಣ ನೀಡುತ್ತಿದ್ದಂತೆಯೇ ಮತ್ತೆ ಹಣ ಕೇಳೋಕೆ ಆರಂಭಿಸಿದ್ದಾರೆ. ಇದರಿಂದ ಅನುಮಾನಗೊಂಡ ವಘೇಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.