ಗುಜರಾತ್ನಲ್ಲಿ ಮಾಂಸಾಹಾರ ಪದಾರ್ಥಗಳ ಮೇಲಿನ ಸಮರ ಮುಂದುವರಿದಿದ್ದು ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳ ಬದಿಯಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಲಾಗಿದೆ.
ಸಾರ್ವಜನಿಕ ರಸ್ತೆಗಳಲ್ಲಿ, ಶಾಲಾ ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾಂಸಾಹಾರಿ ಸ್ಟಾಲ್ಗಳನ್ನು ನಿರ್ಮಿಸಲು ಅವಕಾಶವನ್ನು ನಿರ್ಬಂಧಿಸಲಾಗಿದೆ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಆದೇಶ ಹೊರಡಿಸಿದೆ ಎಂದು ಎಎಂಸಿ ನಗರ ಯೋಜನಾ ಸಮಿತಿ ಅಧ್ಯಕ್ಷ ದೇವಾಂಗ್ ದಾನಿ ಹೇಳಿದ್ದಾರೆ.
ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಿನ್ನಿ ಖರ್ಜೂರ
ಸಾರ್ವಜನಿಕ ರಸ್ತೆಗಳ ಸಮೀಪದಲ್ಲೇ ಮಾಂಸಾಹಾರ ಅಂಗಡಿಗಳು ಇರುವ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಂಗ್ ಹೇಳಿದ್ದಾರೆ.
ಮಾಂಸಾಹಾರ ಸ್ಟಾಲ್ಗಳ ನಿಷೇಧದ ಕುರಿತಂತೆ ಪ್ರತಿಕ್ರಿಯೆ ನೀಡಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಜನರು ತಮಗೆ ಬೇಕಾದ ಆಹಾರವನ್ನು ಸೇವಿಸಲು ಸ್ವತಂತ್ರರು ಎಂದು ಹೇಳಿದ್ದಾರೆ.
ಇಲ್ಲಿ ಸಸ್ಯಹಾರಿ ಅಥವಾ ಮಾಂಸಾಹಾರಿ ಎಂಬ ಪ್ರಶ್ನೆ ಉದ್ಭವಿಸೋದಿಲ್ಲ. ಜನರು ತಮಗೆ ಬೇಕಾದ ಆಹಾರವನ್ನು ಸೇವಿಸಲು ಸ್ವತಂತ್ರ್ಯರಿದ್ದಾರೆ. ಆದರೆ ಸ್ಟಾಲ್ಗಳಲ್ಲಿ ಮಾರಾಟ ಮಾಡುವ ಆಹಾರಗಳು ಹಾನಿಕಾರಕವಾಗಿರಬಾರದು ಹಾಗೂ ಇದರಿಂದ ಸಂಚಾರಕ್ಕೂ ಅಡ್ಡಿಯಾಗುವಂತಿರಬಾರದು ಎಂದು ಭೂಪೇಂದ್ರ ಪಟೇಲ್ ಹೇಳಿದ್ರು.