alex Certify ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ಸಿಪಿಐ ಕಚೇರಿಯಲ್ಲಿದ್ದ AC ತೆಗೆಸಿದ ಕನ್ಹಯ್ಯ.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ಸಿಪಿಐ ಕಚೇರಿಯಲ್ಲಿದ್ದ AC ತೆಗೆಸಿದ ಕನ್ಹಯ್ಯ.​..!

ಕನ್ಹಯ್ಯ ಕುಮಾರ್​ ಇನ್ನೇನು ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಲ್ಲ ಮೂಲಗಳ ಮಾಹಿತಿಯ ನಡುವೆಯೇ ಕನ್ಹಯ್ಯ ಕುಮಾರ್​ರ ಎಸಿ ಕತೆಯೊಂದು ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದಷ್ಟೇ ಕನ್ಹಯ್ಯ ಕುಮಾರ್​ ಪಾಟ್ನಾದ ಸಿಪಿಐ ರಾಜ್ಯ ಕಚೇರಿಗೆ ತಾವು ಅಳವಡಿಸಿದ್ದ ಎಸಿಯನ್ನು ತೆಗೆಸಿದ್ದರು ಎಂದು ಬಿಹಾರದ ಸಿಪಿಐ ರಾಜ್ಯ ಕಾರ್ಯದರ್ಶಿ ರಾಮ್​ ನರೇಶ್​ ಪಾಂಡೆ ಹೇಳಿದ್ರು.

ಕನ್ಹಯ್ಯ ಕುಮಾರ್ ತಮ್ಮ ಸ್ವಂತ ಖರ್ಚಿನಿಂದ ಕೊಠಡಿಗೆ ಎಸಿ ಹಾಕಿಸಿಕೊಂಡಿದ್ದರು. ಹೀಗಾಗಿ ಅವರ ಈ ಕ್ರಮಕ್ಕೆ ನಾನು ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪಾಂಡೆ ಹೇಳಿದ್ರು.

ಕಾಂಗ್ರೆಸ್​ಗೆ ಸೇರ್ಪಡೆಯಾಗುವ ನಿರ್ಧಾರದಿಂದ ಕನ್ಹಯ್ಯ ಹಿಂದೆ ಸರಿಯುತ್ತಾರೆ ಎಂದು ನಾನು ಈಗಲೂ ನಂಬಿದ್ದೇನೆ. ಏಕೆಂದರೆ ಅವರದ್ದು ಕಮ್ಯೂನಿಸ್ಟ್​ ಮನಃಸ್ಥಿತಿ ಹಾಗೂ ಇಂತವರು ತಮ್ಮ ಯೋಚನಾ ಲಹರಿಗಳನ್ನು ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಪಾಂಡೆ ಹೇಳಿದ್ರು.

ಸೆಪ್ಟೆಂಬರ್​ 4 ಹಾಗೂ 5ರಂದು ದೆಹಲಿಯಲ್ಲಿ ನಡೆದಿದ್ದ ಸಿಪಿಐನ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಕೌನ್ಸಿಲ್​ ಸಭೆಯಲ್ಲಿ ಕನ್ಹಯ್ಯ ಭಾಗಿಯಾಗಿದ್ದರು. ಈ ಸಭೆಯಲ್ಲಿ ಅವರು ಪಕ್ಷ ತೊರೆಯುವ ಬಗ್ಗೆ ಸಣ್ಣ ಸುಳಿವನ್ನೂ ನೀಡಿರಲಿಲ್ಲ. ಅಥವಾ ಪಕ್ಷದಲ್ಲಿ ಯಾವುದೇ ಸ್ಥಾನ ಬೇಕು ಅಂತಲೂ ಕನ್ಹಯ್ಯ ಬೇಡಿಕೆ ಇಟ್ಟಿಲ್ಲ ಎಂದು ಪಾಂಡೆ ಹೇಳಿದ್ರು.

ಪ್ರಸ್ತುತ ಕನ್ಹಯ್ಯ ಕುಮಾರ್​ ಸಿಪಿಐ ಮುಖಂಡ ಹಾಗೂ ನ್ಯಾಷನಲ್​ ಎಕ್ಸಿಕ್ಯೂಟಿವ್​ ಕೌನ್ಸಿಲ್​ನ ಸದಸ್ಯ ಕೂಡ ಆಗಿದ್ದಾರೆ. ಕನ್ಹಯ್ಯ ಹಾಗೂ ಗುಜರಾತ್​ನ ದಲಿತ ನಾಯಕ ಜಿಗ್ನೇಶ್​ ಮೇವಾನಿ ಇನ್ನೇನು ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...