ಕನ್ಹಯ್ಯ ಕುಮಾರ್ ಇನ್ನೇನು ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಲ್ಲ ಮೂಲಗಳ ಮಾಹಿತಿಯ ನಡುವೆಯೇ ಕನ್ಹಯ್ಯ ಕುಮಾರ್ರ ಎಸಿ ಕತೆಯೊಂದು ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಕನ್ಹಯ್ಯ ಕುಮಾರ್ ಪಾಟ್ನಾದ ಸಿಪಿಐ ರಾಜ್ಯ ಕಚೇರಿಗೆ ತಾವು ಅಳವಡಿಸಿದ್ದ ಎಸಿಯನ್ನು ತೆಗೆಸಿದ್ದರು ಎಂದು ಬಿಹಾರದ ಸಿಪಿಐ ರಾಜ್ಯ ಕಾರ್ಯದರ್ಶಿ ರಾಮ್ ನರೇಶ್ ಪಾಂಡೆ ಹೇಳಿದ್ರು.
ಕನ್ಹಯ್ಯ ಕುಮಾರ್ ತಮ್ಮ ಸ್ವಂತ ಖರ್ಚಿನಿಂದ ಕೊಠಡಿಗೆ ಎಸಿ ಹಾಕಿಸಿಕೊಂಡಿದ್ದರು. ಹೀಗಾಗಿ ಅವರ ಈ ಕ್ರಮಕ್ಕೆ ನಾನು ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪಾಂಡೆ ಹೇಳಿದ್ರು.
ಕಾಂಗ್ರೆಸ್ಗೆ ಸೇರ್ಪಡೆಯಾಗುವ ನಿರ್ಧಾರದಿಂದ ಕನ್ಹಯ್ಯ ಹಿಂದೆ ಸರಿಯುತ್ತಾರೆ ಎಂದು ನಾನು ಈಗಲೂ ನಂಬಿದ್ದೇನೆ. ಏಕೆಂದರೆ ಅವರದ್ದು ಕಮ್ಯೂನಿಸ್ಟ್ ಮನಃಸ್ಥಿತಿ ಹಾಗೂ ಇಂತವರು ತಮ್ಮ ಯೋಚನಾ ಲಹರಿಗಳನ್ನು ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಪಾಂಡೆ ಹೇಳಿದ್ರು.
ಸೆಪ್ಟೆಂಬರ್ 4 ಹಾಗೂ 5ರಂದು ದೆಹಲಿಯಲ್ಲಿ ನಡೆದಿದ್ದ ಸಿಪಿಐನ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಕೌನ್ಸಿಲ್ ಸಭೆಯಲ್ಲಿ ಕನ್ಹಯ್ಯ ಭಾಗಿಯಾಗಿದ್ದರು. ಈ ಸಭೆಯಲ್ಲಿ ಅವರು ಪಕ್ಷ ತೊರೆಯುವ ಬಗ್ಗೆ ಸಣ್ಣ ಸುಳಿವನ್ನೂ ನೀಡಿರಲಿಲ್ಲ. ಅಥವಾ ಪಕ್ಷದಲ್ಲಿ ಯಾವುದೇ ಸ್ಥಾನ ಬೇಕು ಅಂತಲೂ ಕನ್ಹಯ್ಯ ಬೇಡಿಕೆ ಇಟ್ಟಿಲ್ಲ ಎಂದು ಪಾಂಡೆ ಹೇಳಿದ್ರು.
ಪ್ರಸ್ತುತ ಕನ್ಹಯ್ಯ ಕುಮಾರ್ ಸಿಪಿಐ ಮುಖಂಡ ಹಾಗೂ ನ್ಯಾಷನಲ್ ಎಕ್ಸಿಕ್ಯೂಟಿವ್ ಕೌನ್ಸಿಲ್ನ ಸದಸ್ಯ ಕೂಡ ಆಗಿದ್ದಾರೆ. ಕನ್ಹಯ್ಯ ಹಾಗೂ ಗುಜರಾತ್ನ ದಲಿತ ನಾಯಕ ಜಿಗ್ನೇಶ್ ಮೇವಾನಿ ಇನ್ನೇನು ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗ್ತಿದೆ.