alex Certify ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಯಂತ್ರೋಪಕರಣ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಯಂತ್ರೋಪಕರಣ ವಿತರಣೆ

ಕೃಷಿ ಇಲಾಖೆ ವತಿಯಿಂದ 2021-22 ನೇ ಸಾಲಿನ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ಶೇ.50 ರ ವರೆಗಿನ ರಿಯಾಯ್ತಿ ದರದಲ್ಲಿ ಕಳೆಕೊಚ್ಚುವ ಯಂತ್ರಗಳು(ಪವರ್ ವೀಡರ್), ಬ್ಯಾಟರಿ ಸ್ಪ್ರೇಯರ್ಸ್, ಪವರ್ ಸ್ಪ್ರೇಯರ್ಸ್, ರೋಟೋವೇಟರ್, 5 ಹೆಚ್.ಪಿ., 8 ಹೆಚ್.ಪಿ. ಮತ್ತು 10 ಎಚ್‍ಪಿ ಡೀಸೆಲ್ ಪಂಪ್‍ ಸೆಟ್‍ ಗಳನ್ನು ವಿತರಿಸಲು ಉಪಕರಣಗಳು ಲಭ್ಯವಿದೆ.

ಆಸಕ್ತ ರೈತರು, ಅಗತ್ಯ ದಾಖಲಾತಿಗಳನ್ನು ನೀಡಿ ಮಡಿಕೇರಿ, ಭಾಗಮಂಡಲ, ನಾಪೋಕ್ಲು ಮತ್ತು ಸಂಪಾಜೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳಲು ಕೋರಿದೆ. ಮತ್ತು ಶೇ.90 ರ ರಿಯಾಯ್ತಿಯಲ್ಲಿ ತುಂತುರು ನೀರಾವರಿ ಘಟಕ ವಿತರಿಸುವ ಕಾರ್ಯಕ್ರಮವಿದ್ದು ರೈತರು ಅರ್ಜಿ ನೀಡಬಹುದು ಎಂದು ಮಡಿಕೇರಿ ತಾ. ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...