alex Certify ಸ್ನೇಹಿತರಿಂದಲೇ ಉದ್ಯಮಿ ಪುತ್ರನ ಕಿಡ್ನಾಪ್:‌ ಕೊಲೆ ಮಾಡಿ ಕೋವಿಡ್‌ ಹೆಸರಿನಲ್ಲಿ ಸುಟ್ಟು ಹಾಕಿದ ಆರೋಪಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರಿಂದಲೇ ಉದ್ಯಮಿ ಪುತ್ರನ ಕಿಡ್ನಾಪ್:‌ ಕೊಲೆ ಮಾಡಿ ಕೋವಿಡ್‌ ಹೆಸರಿನಲ್ಲಿ ಸುಟ್ಟು ಹಾಕಿದ ಆರೋಪಿಗಳು

ಸಚಿನ್ ಚೌಹಾಣ್ ಎಂಬ 25ರ ಹರೆಯದ ಯುವಕನನ್ನು ಅಪಹರಣ ಮಾಡಿದ ಆತನ ಸ್ನೇಹಿತರು ಭಾರೀ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟು, ಕೊನೆಗೆ ಆತನನ್ನು ಕೊಂದು ಕೋವಿಡ್‌ನಿಂದ ಸತ್ತಿದ್ದಾನೆ ಎಂದು ಸಾಬೀತು ಮಾಡಲು ಹೊರಟ ಘಟನೆ ಆಗ್ರಾದಲ್ಲಿ ನಡೆದಿದೆ.

ಶೀತಲ ಸಂಗ್ರಹದ ಗೋದಾಮಿನ ಮಾಲೀಕ ಸುರೇಶ್ ಚೌಹಾಣ್‌ರ ಏಕಮಾತ್ರ ಪುತ್ರನಾದ ಸಚಿನ್‌ ಜೂನ್ 21ರಂದು ಆತನ ಸ್ನೇಹಿತರಿಂದ ಅಪಹರಣಕ್ಕೊಳಗಾಗಿ ಅದೇ ರಾತ್ರಿ ಕೊಲೆಯಾಗಿದ್ದಾರೆ. ತಮ್ಮ ಪುತ್ರ ನಾಪತ್ತೆಯಾಗಿದ್ದಾನೆ ಎಂದು ಸಚಿನ್ ಕುಟುಂಬಸ್ಥರು ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಆಗ್ರಾ ಪೊಲೀಸ್‌ನ ವಿಶೇಷ ಪಡೆಗೆ ಸಣ್ಣ ಸುಳಿವೊಂದು ಸಿಕ್ಕಿ ಅದರ ಜಾಡು ಹಿಡಿದಾಗ ಐವರು ಯುವಕರನ್ನು ಬಂಧಿಸಲಾಗಿದೆ. ಇವರ ಪೈಕಿ ಸಚಿನ್‌ನ ಆಪ್ತ ಸ್ನೇಹಿತ ಹರ್ಷ್ ಚೌಹಾಣ್ ಸಹ ಒಬ್ಬನಾಗಿದ್ದು, ಈತ ಸಚಿನ್ ತಂದೆಯ ವ್ಯಾಪಾರದ ಪಾಲುದಾರನ ಪುತ್ರನೂ ಹೌದು. ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಇವರೆಲ್ಲಾ ಒಪ್ಪಿಕೊಂಡಿದ್ದಾರೆ.

ನಾಯಿಯನ್ನೂ ಬಿಡದ 60 ವರ್ಷದ ಕಾಮುಕ ವೈದ್ಯ

ಬಂಧಿತರಲ್ಲೊಬ್ಬನಾದ ಅಸ್ವಾನಿಯೊಂದಿಗೆ ಒಡನಾಟ ಬೆಳೆಸಿಕೊಂಡಿದ್ದ ಸಚಿನ್ ಹಾಗೂ ಹರ್ಷ್, ಆತನ ಕ್ಲಬ್‌ಗೆ ಯಾವಾಗಲೂ ಭೇಟಿ ಕೊಡುತ್ತಿದ್ದರು. ಅಸ್ವಾನಿಯೊಂದಿಗೆ ಸ್ನೇಹಿತನಾದ ಸಚಿನ್, ಕೂಡಲೇ ಆತನಿಂದ ದುಡ್ಡು ಪಡೆಯಲು ಆರಂಭಿಸಿದ. ಹೀಗೆ ಪದೇ ಪದೇ ದುಡ್ಡು ಕೇಳಿ ಕೇಳಿ ಸಾಲ 40 ಲಕ್ಷ ರೂ.ಗಳ ಮಟ್ಟ ತಲುಪಿತ್ತು. ದುಡ್ಡು ವಾಪಸ್ ಕೊಡಲು ಅಸ್ವಾನಿ ಕೇಳಿದಾಗ ಅದಕ್ಕೆ ಸಚಿನ್ ಕಿವಿಗೊಡುತ್ತಿರಲಿಲ್ಲ.

ಇದರಿಂದ ರೋಸಿ ಹೋಗಿದ್ದ ಅಸ್ವಾನಿ ಹಾಗೂ ಹರ್ಷ್, ಸಚಿನ್‌ನನ್ನು ಅಪಹರಣ ಮಾಡಿ ಆತನ ತಂದೆಯಿಂದ ಎರಡು ಕೋಟಿ ರೂ.ಗಳನ್ನು ಕೀಳುವ ಪ್ಲಾನ್ ಮಾಡಿದ್ದಾರೆ.

ಜೂನ್ 21ರಂದು ತಮ್ಮೊಂದಿಗೆ ಹತ್ತಿರದ ಹಳ್ಳಿಯೊಂದರಲ್ಲಿ ಎಣ್ಣೆ ಪಾರ್ಟಿಯಲ್ಲಿ ಭಾಗಿಯಾಗಲು ಕರೆದು ಅಸ್ವಾನಿ ಸಚಿನ್‌ಗೆ ಕರೆ ಮಾಡಿದ್ದಾನೆ. ಆ ವೇಳೆ ಸಚಿನ್‌ನ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರನ್ನು ಹಾದಿ ತಪ್ಪಿಸಲು ಆಪಾದಿತರು ಕೂಡಲೇ ಪಿಪಿಇ ಕಿಟ್‌ಗಳನ್ನು ತಂದು, ತಮ್ಮ ದೇಹಗಳನ್ನು ಮುಚ್ಚಿಕೊಂಡು ಸಚಿನ್‌ ದೇಹವನ್ನು ಸುಟ್ಟುಹಾಕಿದ್ದಾರೆ. ಮರುದಿನ ಅಸ್ವಾನಿಯ ಸಹೋದರ ಸಂಬಂಧಿ ಹ್ಯಾಪಿ ಖನ್ನಾ ಹಾಗೂ ಆತನ ಸ್ನೇಹಿತ ರಿಂಕು ಸಚಿನ್‌ ಚಿತಾಭಸ್ಮವನ್ನು ಸಂಗ್ರಹಿಸಿ ಯಮುನಾ ನದಿಯಲ್ಲಿ ಬಿಟ್ಟಿದ್ದಾರೆ.

ಸುಮ್ಮನೆ ನನ್ನನ್ನು ವಿಲನ್ ಮಾಡ್ಬೇಡಿ….ಫಲಿತಾಂಶ ಯಾವಾಗ ಬರುತ್ತೆ ಗೊತ್ತಿಲ್ಲ ಎಂದ ಸಚಿವ ಯೋಗೇಶ್ವರ್

ಘಾಟ್‌ನಲ್ಲಿ ಆಪಾದಿತರಲ್ಲೊಬ್ಬರು ತಮ್ಮ ಸಂಬಂಧಿಕರೊಬ್ಬರ ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದಾರೆ. ಹ್ಯಾಪಿ ಸ್ನೇಹಿತ ಮನೋಜ್ ಬನ್ಸಾಲ್, ಸಚಿನ್‌ನ ಮೊಬೈಲ್ ಫೋನ್‌ ಅನ್ನು ಕಾನ್ಪುರಕ್ಕೆ ಕೊಂಡೊಯ್ದು ಪೊಲೀಸರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾನೆ. ಎರಡು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ಕರೆ ಮಾಡಬೇಕಿದ್ದ ಮನೋಜ್‌ ಹಾಗೆ ಮಾಡಲು ಧೈರ್ಯ ಸಾಲದೇ ಇದ್ದ ಕಾರಣ ಸುಮ್ಮನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿನ್‌ನ ಸಂಖ್ಯೆಗೆ ಆತನ ತಾಯಿ ಕರೆ ಮಾಡಿದಾಗ ರಿಸೀವ್‌ ಮಾಡಿದ ಮನೋಜ್, ಆತ ನೋಯಿಡಾದಲ್ಲಿದ್ದು ಸದ್ಯ ಮಲಗಿದ್ದಾನೆ ಎಂದು ಸುಳ್ಳು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಸಚಿನ್‌ ಕುಟುಂಬ ಜೂನ್ 22ರಂದು ಪೊಲೀಸರಿಗೆ ದೂರು ಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...