ಬಿಸಿ ರಕ್ತದ ಅಮಲಿನಲ್ಲಿ ಉತ್ತರ ಪ್ರದೇಶ ಪೊಲೀಸ್ ಯುವ ಸಿಬ್ಬಂದಿಯೊಬ್ಬರು ಚಲನಚಿತ್ರವೊಂದರ ಡೈಲಾಗ್ ಒಂದಕ್ಕೆ ಸ್ಪೂಫ್ ಮಾಡಿಕೊಂಡು, ರಿವಾಲ್ವರ್ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
’ರಂಗ್ಬಾಜ಼ಿ’ ಡೈಲಾಗ್ ಒಂದಕ್ಕೆ ಲಿಪ್ಸಿಂಕಿಂಗ್ ಮಾಡಿದ ಆಗ್ರಾದ ಪೊಲೀಸ್ ಪೇದೆ ಪ್ರಿಯಾಂಕಾ ಮಿಶ್ರಾ, ತಮ್ಮ ರಾಜ್ಯದ ಗೂಂಡಾ ಸಂಸ್ಕೃತಿಯನ್ನು ವೈಭವೀಕರಿಸಿ ಮಾತನಾಡುತ್ತಾ, “ಏನೂ ಕಾರಣವೇ ಇಲ್ಲದೇ ಹರಿಯಾಣಾ ಹಾಗೂ ಪಂಜಾಬ್ಗೆ ಕೆಟ್ಟ ಹೆಸರು ಬಂದಿದೆ. ಉತ್ತರ ಪ್ರದೇಶಕ್ಕೆ ಬನ್ನಿ, ರಂಗ್ಬಾಜ಼ಿ ಅಂದರೆ ಏನೆಂದು ತೋರುತ್ತೇವೆ. ಇಲ್ಲಿನ 5 ವರ್ಷದ ಮಕ್ಕಳೂ ಗನ್ ಹಿಡಿಯುತ್ತವೆ,” ಎಂದು ಡೈಲಾಗ್ನಲ್ಲಿ ಹೇಳಲಾಗಿದೆ.
ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..!
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸದ್ದು ಮಾಡಲು ಆರಂಭಿಸಿದ ಮೇಲೆ ಪೇದೆಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಪ್ರಿಯಾಂಕಾರ ವರ್ತನೆಯು ಉತ್ತರ ಪ್ರದೇಶ ಪೊಲೀಸ್ನ ಶಿಸ್ತನ್ನು ಉಲ್ಲಂಘಿಸಿದೆ ಎಂದ ಹಿರಿಯ ಅಧಿಕಾರಿಯೊಬ್ಬರು, ತನಿಖೆಗೆ ಆದೇಶಿಸಿರುವ ವಿಚಾರ ತಿಳಿಸಿದ್ದಾರೆ.
“ಇಲಾಖೆಯಿಂದ ಸೇವಾ ರಿವಾಲ್ವರ್ ಪಡೆದಿರದ ಪ್ರಿಯಾಂಕಾ ಅವರು ಪೊಲೀಸ್ ದಾಸ್ತಾನು ಕೋಣೆಯಲ್ಲಿ ಇಟ್ಟಿದ್ದ ರಿವಾಲ್ವರ್ಗಳನ್ನು ಬಳಸಿ ಹೀಗೆ ವಿಡಿಯೋ ಚಿತ್ರೀಕರಿಸಿದ್ದಾರೆ,” ಎಂದು ಎಸ್ಎಸ್ಪಿ ಶ್ರೇಣಿಯ ಅಧಿಕಾರಿ ತಿಳಿಸಿದ್ದಾರೆ.
ಸದ್ಯಕ್ಕೆ ಪ್ರಿಯಾಂಕಾರನ್ನು ಬೇರೊಂದು ಠಾಣೆಗೆ ವರ್ಗಾವಣೆ ಮಾಡಲಾಗಿದೆ.