alex Certify ರೈಲ್ವೆ ಟ್ರ್ಯಾಕ್​ ಮೇಲೆ ರೀಲ್ಸ್​ ಮಾಡಿದ ತಾಯಿ – ಮಗಳು: ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಟ್ರ್ಯಾಕ್​ ಮೇಲೆ ರೀಲ್ಸ್​ ಮಾಡಿದ ತಾಯಿ – ಮಗಳು: ವೈರಲ್​ ಆಯ್ತು ವಿಡಿಯೋ

ಸೋಶಿಯಲ್​ ಮೀಡಿಯಾದ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೀಲ್ಸ್​​ ಮಾಡುವ ಸಲುವಾಗಿ ಅನೇಕರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ತಿದ್ದಾರೆ.

ಅಪಾಯಕಾರಿ ಸಾಹಸಗಳನ್ನು ಮಾಡುವ ಮೂಲಕ ರೀಲ್ಸ್​ ಮಾಡಿದ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಇದೇ ರೀತಿಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದ್ದು ತಾಯಿ – ಮಗಳು ರೈಲ್ವೆ ಟ್ರ್ಯಾಕ್​ ಮೇಲೆ ರೀಲ್ಸ್​ ಮಾಡಿದ್ದಾರೆ. ಅಬ್​ ತೇರೆ ಬಿನ್​ ಹಮ್​ ಝೀ ಲೇಂಗೆ ಎಂಬ ಹಾಡಿಗೆ ರೈಲ್ವೆ ಟ್ರ್ಯಾಕ್​​ನಲ್ಲಿ ತಾಯಿ ಹೆಜ್ಜೆ ಹಾಕಿದರೆ ಮಗಳು ಅದನ್ನು ರೆಕಾರ್ಡ್ ಮಾಡಿದ್ದಾಳೆ.

ರೈಲು ಹಳಿಗಳ ಮೇಲೆ ತಾಯಿ ತನ್ನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದರೆ ಮಗಳು ಇದನ್ನು ಮೊಬೈಲ್​ ಕ್ಯಾಮರಾದಲ್ಲಿ ಶೂಟ್​ ಮಾಡುತ್ತಿದ್ದಳು ಎನ್ನಲಾಗಿದೆ.

ವೈರಲ್​ ಆಗಿರುವ ಈ ವಿಡಿಯೋದಲ್ಲಿ, ತಾಯಿ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರೋದನ್ನು ಕಾಣಬಹುದಾಗಿದೆ. ಬಳಿಕ ರೈಲು ಹಳಿಗಳ ತಾಯಿ ನೃತ್ಯ ಪ್ರದರ್ಶಿಸಿದ್ದಾರೆ. ಆಗ್ರಾದ ಫೋರ್ಟ್​ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ರೈಲು ಹಳಿಗಳ ಮೇಲೆ ನೃತ್ಯ ಮಾಡಿದ ಮಹಿಳೆಯನ್ನು ಮೀನಾ ಸಿಂಗ್​ ಎಂದು ಗುರುತಿಸಲಾಗಿದೆ. ಮೀನಾ ಸಿಂಗ್​ ಸ್ವಂತ ಯುಟ್ಯೂಬ್​ ಚಾನೆಲ್​ ಹೊಂದಿದ್ದು ಇದರಲ್ಲಿ 47 ಸಾವಿರಕ್ಕೂ ಅಧಿಕ ಸಬ್​ಸ್ಕ್ರೈಬರ್​ ಹೊಂದಿದ್ದಾಳೆ. ಈಕೆಯ ಯುಟ್ಯೂಬ್​ ಚಾನೆಲ್​ನಲ್ಲಿ ರೈಲ್ವೆ ಹಳಿಗಳ ಮೇಲೆ ಮಾಡಿದ ಇನ್ನೂ ಅನೇಕ ವಿಡಿಯೋಗಳನ್ನು ಕಾಣಬಹುದಾಗಿದೆ. ರೈಲ್ವೆ ಹಳಿಗಳ ಮೇಲೆ ಈ ಮಹಿಳೆ ಭೋಜ್​ಪುರಿ ಹಾಡಿಗೆ ಕುಣಿದಿದ್ದು ಆ ಸಂದರ್ಭದಲ್ಲಿ ರೈಲು ಹಳಿಗಳ ಮೇಲೆ ಬಂದಿದೆ. ರೈಲು ಬಂದರೂ ಕ್ಯಾರೆ ಎನ್ನದೇ ಮೀನಾ ಸಿಂಗ್​ ತನ್ನ ಪಾಡಿಗೆ ತಾನು ರೀಲ್ಸ್​ ಮಾಡೋದ್ರಲ್ಲಿ ಬ್ಯುಸಿ ಆಗಿದ್ದರು.

ಮೀನಾ ಸಿಂಗ್​ರ ಈ ವೈರಲ್​ ವಿಡಿಯೋ ಎಲ್ಲೆಡೆ ಸಾಕಷ್ಟು ವಿರೋಧಕ್ಕೆ ಕಾರಣವಾಗುತ್ತಿದ್ದಂತೆಯೇ ಈಕೆಯ ವಿರುದ್ಧ ರೈಲ್ವೆ ಕಾಯ್ದೆ 145 ಹಾಗೂ 147 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಾಯಿ ಹಾಗೂ ಮಹಿಳೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇನ್ಮೇಲೆ ಈ ರೀತಿಯ ಕೃತ್ಯ ಎಸಗುವುದಿಲ್ಲ ಎಂದು ತಾಯಿ ಮಗಳು ತಪ್ಪೊಪ್ಪಿಗೆ ನೀಡಿದ ಬಳಿಕ ಇಬ್ಬರಿಗೂ ಜಾಮೀನು ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...