alex Certify ನೌಕಾಪಡೆಯ ‘ಅಗ್ನಿವೀರ್’​ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೇ ? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕಾಪಡೆಯ ‘ಅಗ್ನಿವೀರ್’​ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಭಾರತೀಯ ನೌಕಾಪಡೆಯು ಅಗ್ನಿಪಥ್​ ನೇಮಕಾತಿ ಯೋಜನೆಯಡಿಯಲ್ಲಿ ಅಗ್ನಿವೀರ್​ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆ ಪ್ರಾರಂಭಿಸಿದೆ.

ಆಸಕ್ತಿ ಇರುವ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ joinindiannavy.gov.in ಮೂಲಕ ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅಗ್ನಿವೀರ್​ 2022 ಬ್ಯಾಚ್​ಗೆ 23 ವರ್ಷಗಳವರೆಗೆ ಗರಿಷ್ಠ ವಯಸ್ಸಿನ ಮಿತಿಯ ಒಂದು ಬಾರಿ ಸಡಿಲಿಕೆಯನ್ನು ನೀಡಲಾಗಿದೆ ಎಂಬುದು ಮಹತ್ವದ ಸಂಗತಿಯಾಗಿದೆ.

ನೌಕಾಪಡೆಯ ಅಗ್ನಿವೀರ್​ಗೆ ಅರ್ಜಿ ಸಲ್ಲಿಸುವುದು ಹೇಗೆಂದರೆ, ಮೊದಲು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ, ಮುಖಪುಟದಲ್ಲಿ, ನೋಂದಣಿ ಟ್ಯಾಬ್​ ಮೇಲೆ ಕ್ಲಿಕ್​ ಮಾಡಿ ಅಗತ್ಯವಿರುವ ಮಾಹಿತಿ ನಮೂದಿಸಬೇಕು.

ನಿಮ್ಮ ನೋಂದಣಿ ಸಂಖ್ಯೆ ಅಥವಾ ಇಮೇಲ್​ ಐಡಿ ಮತ್ತು ಪಾಸ್​ವರ್ಡ್​ ಬಳಸಿ ವೆಬ್​ಸೈಟ್​ಗೆ ಲಾಗಿನ್​ ಮಾಡಿ. ‘ಕರೆಂಟ್​ ಅಪರ್ಚುನಿಟಿ’ ಮೇಲೆ ಕ್ಲಿಕ್​ ಮಾಡಿ ಮತ್ತು ಅಗ್ನಿವೀರ್ ನೇಮಕಾತಿ ಆಯ್ಕೆಮಾಡಿ
ಅಗ್ನಿವೀರ್​ ನೇಮಕಾತಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್​ಲೋಡ್​ ಮಾಡಿ.

ಭಾರತೀಯ ನೌಕಾಪಡೆಯ ಅಗ್ನಿವೀರ್​ ನೋಂದಣಿಗಾಗಿ ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ಡೌನ್​ಲೋಡ್​ ಮಾಡಿ, ಮುಂದಿನ ದಿನಗಳಲ್ಲಿ ಉಲ್ಲೇಖಗಳಿಗಾಗಿ ಮುದ್ರಿಸಿ ತೆಗೆದುಕೊಳ್ಳಿ.

ಭಾರತೀಯ ನೌಕಾಪಡೆಯ ಅಗ್ನಿವೀರ್​ ನೇಮಕಾತಿಗೆ ಹಾಜರಾಗುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್​ ಪಟ್ಟಿಯನ್ನು ತಯಾರಿಸಲು ಪರಿಗಣಿಸಲಾಗುತ್ತದೆ. ದೈಹಿಕ ಫಿಟ್ನೆಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.

ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳನ್ನು ನೇಮಕಾತಿ ವೈದ್ಯಕಿಯ ಪರೀಕ್ಷೆಗಾಗಿ ಐಎನ್​ಎಸ್​ ಚಿಲ್ಕಾಗೆ ಕರೆಯಲಾಗುವುದು. ಅಭ್ಯರ್ಥಿ ಆಹ್ವಾನ ಪತ್ರದಲ್ಲಿ ನಮೂದಿಸಲಾದ ದಿನಾಂಕ ಮತ್ತು ಸಮಯದಲ್ಲಿ ವರದಿ ಮಾಡಲು ವಿಫಲವಾದಲ್ಲಿ ಅಭ್ಯರ್ಥಿ ಆಯ್ಕೆಯು ರದ್ದುಗೊಳ್ಳುತ್ತದೆ ಎಂದು ಭಾರತೀಯ ನೌಕಾಪಡೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಭರ್ತಿ ಮಾಡುವಾಗ ಅಪ್​ಲೋಡ್​ ಮಾಡಿದ ಮೂಲ ದಾಖಲೆಗಳು ಅಂದರೆ ಮೂಲ ಪ್ರಮಾಣಪತ್ರಗಳು, ಮಾರ್ಕ್​ಶೀಟ್​ಗಳು, ನಿವಾಸ ಪ್ರಮಾಣಪತ್ರ ಮತ್ತು ಎನ್​ಸಿಸಿ ಪ್ರಮಾಣಪತ್ರ (ಹೊಂದಿದ್ದರೆ) ತರಬೇಕು. ಆನ್​ಲೈನ್​ ಅಪ್ಲಿಕೇಶನ್​ನಲ್ಲಿ ಒದಗಿಸಲಾದ ವಿವರಗಳು ಯಾವುದೇ ಹಂತದಲ್ಲಿ ಮೂಲ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ, ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುವುದು ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...