alex Certify ಶಿಕ್ಷೆ ವಿನಾಯಿತಿಗೆ ವಯಸ್ಸನ್ನು ಪರಿಗಣಿಸಲು ಸಾಧ್ಯವಿಲ್ಲ; ವೃದ್ದನಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯದ ಅಭಿಮತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷೆ ವಿನಾಯಿತಿಗೆ ವಯಸ್ಸನ್ನು ಪರಿಗಣಿಸಲು ಸಾಧ್ಯವಿಲ್ಲ; ವೃದ್ದನಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯದ ಅಭಿಮತ

13 ವರ್ಷದ ಮಲಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ 70 ವರ್ಷದ ವೃದ್ಧನೊಬ್ಬನಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ತನ್ನ ಮಲಮೊಮ್ಮಗಳಿಗೆ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ವಿನಾಯಿತಿಗೆ ವಯಸ್ಸನ್ನು ಪರಿಗಣಿಸಲು ಸಾಧ್ಯವಿಲ್ಲ. ಆ ಹೆಣ್ಣು ಮಗುವಿನ ಮೇಲೆ ವೃದ್ಧ ದೌರ್ಜನ್ಯ ನಡೆಸಿದ್ದಾನೆ. ಹೀಗಾಗಿ ಆತನಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಪರಾಧಿಗಳಿಗೆ ಸೂಕ್ತ ಶಿಕ್ಷೆಯನ್ನು ವಿಧಿಸಬೇಕಿದೆ. ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯವು ಕೇವಲ ಎಲ್ಲಾ ಮಹಿಳೆಯರ ವಿರುದ್ಧದ ಅಪರಾಧವಲ್ಲ. ಇದು ಸಮಾಜದ ವಿರುದ್ಧದ ಗಂಭೀರವಾದ ಅಪರಾಧವಾಗಿದೆ. ಕಾಮಪಿಪಾಸುಗಳಿಗೆ ಚಿಕ್ಕ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಬಾಲಕಿಯ ಮಲತಂದೆ 2014 ರಲ್ಲಿ ವೃದ್ಧನ ವಿರುದ್ಧ ದೂರು ಸಲ್ಲಿಸಿದ್ದರು. 2014 ರ ಸೆಪ್ಟೆಂಬರ್ ನಲ್ಲಿ ತಾನು ಹೊರ ಹೋಗಿ ಬಂದಾಗ ವೃದ್ಧನು ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಫೋನ್ ನಲ್ಲಿ ಕೆಲವು ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಿದರು ಎಂದು ಹೇಳಿಕೊಂಡಿದ್ದಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...