alex Certify BIG NEWS: ವೆಂಕಯ್ಯ ನಾಯ್ಡು ಬಳಿಕ ಮೋಹನ್​ ಭಾಗ್ವತ್​ ಟ್ವಿಟರ್​ ಖಾತೆಯ ಬ್ಲೂ ಮಾರ್ಕ್​ ಮಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೆಂಕಯ್ಯ ನಾಯ್ಡು ಬಳಿಕ ಮೋಹನ್​ ಭಾಗ್ವತ್​ ಟ್ವಿಟರ್​ ಖಾತೆಯ ಬ್ಲೂ ಮಾರ್ಕ್​ ಮಾಯ..!

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಳಿಕ ಇದೀಗ ಟ್ವಿಟರ್​​ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​ ವೈಯಕ್ತಿಕ ಟ್ವಿಟರ್​ ಖಾತೆಯಿಂದ ನೀಲಿ ಬಣ್ಣದ ಟಿಕ್​ನ್ನು ತೆಗೆದು ಹಾಕಿದೆ. ಮೋಹನ್​ ಭಾಗ್ವತ್​ಗೆ ಟ್ವಿಟರ್​ನಲ್ಲಿ 20.76 ಲಕ್ಷ ಅನುಯಾಯಿಗಳು ಇದ್ದಾರೆ.

ಇಂದು ಬೆಳಗ್ಗೆಯಷ್ಟೇ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್​ ಖಾತೆಯಿಂದ ನೀಲಿ ಬಣ್ಣದ ಟಿಕ್​ನ್ನು ಟ್ವಿಟರ್ ಅಳಿಸಿಹಾಕಿತ್ತು. ಒಂದು ವರ್ಷಗಳ ಕಾಲ ವೆಂಕಯ್ಯನಾಯ್ಡು ವೈಯಕ್ತಿಕ ಟ್ವಿಟರ್​ ಖಾತೆಯನ್ನ ಬಳಕೆ ಮಾಡದ್ದಕ್ಕೆ ಈ ರೀತಿ ಆಗಿದೆ ಎಂದು ಉಪರಾಷ್ಟ್ರಪತಿ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದರು. ಬಳಿಕ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಗೆ ನೀಲಿ ಬಣ್ಣದ ಟಿಕ್​ನ್ನು ಟ್ವಿಟರ್​ ಮರುಸ್ಥಾಪಿಸಿತ್ತು.

ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಗಣ್ಯರ ಅಧಿಕೃತ ಖಾತೆ ಎಂದು ಸೂಚಿಸುವ ಸಲುವಾಗಿ ಈ ರೀತಿಯ ಬ್ಲೂ ಮಾರ್ಕ್​ನ್ನು ಟ್ವಿಟರ್​ ನೀಡುತ್ತೆ. ಆದರೆ ಕೇಂದ್ರ ಸರ್ಕಾರ ಹಾಗೂ ಟ್ವಿಟರ್​ ನಡುವೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಟ್ವಿಟರ್​ ಈ ರೀತಿ ಮಾಡ್ತಿರೋದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...