
ಇಂದು ಬೆಳಗ್ಗೆಯಷ್ಟೇ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯಿಂದ ನೀಲಿ ಬಣ್ಣದ ಟಿಕ್ನ್ನು ಟ್ವಿಟರ್ ಅಳಿಸಿಹಾಕಿತ್ತು. ಒಂದು ವರ್ಷಗಳ ಕಾಲ ವೆಂಕಯ್ಯನಾಯ್ಡು ವೈಯಕ್ತಿಕ ಟ್ವಿಟರ್ ಖಾತೆಯನ್ನ ಬಳಕೆ ಮಾಡದ್ದಕ್ಕೆ ಈ ರೀತಿ ಆಗಿದೆ ಎಂದು ಉಪರಾಷ್ಟ್ರಪತಿ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದರು. ಬಳಿಕ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಗೆ ನೀಲಿ ಬಣ್ಣದ ಟಿಕ್ನ್ನು ಟ್ವಿಟರ್ ಮರುಸ್ಥಾಪಿಸಿತ್ತು.
ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಗಣ್ಯರ ಅಧಿಕೃತ ಖಾತೆ ಎಂದು ಸೂಚಿಸುವ ಸಲುವಾಗಿ ಈ ರೀತಿಯ ಬ್ಲೂ ಮಾರ್ಕ್ನ್ನು ಟ್ವಿಟರ್ ನೀಡುತ್ತೆ. ಆದರೆ ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಟ್ವಿಟರ್ ಈ ರೀತಿ ಮಾಡ್ತಿರೋದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.