ನೈರೋಬಿ: ಬ್ರಿಟನ್ ಬಳಿಕ ನೈಜೀರಿಯಾ ವೈರಸ್ ಆತಂಕ ಸೃಷ್ಟಿಸಿದೆ. ನೈಜಿರಿಯಾದಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿದೆ.
ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ವೈರಸ್ ಗಿಂತಲೂ ಭಿನ್ನ ಮಾದರಿಯ ವೈರಸ್ ಪರೀಕ್ಷೆಗಳಲ್ಲಿ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟು ಮಾದರಿ ಪರೀಕ್ಷೆ ಕೈಗೊಳ್ಳಲಾಗಿದೆ. ನೈಜೀರಿಯಾದಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ಮಾದರಿ ಪತ್ತೆಯಾಗಿದ್ದು, ಭಾರಿ ಆತಂಕ ಮೂಡಿಸಿದೆ.
ದಕ್ಷಿಣ ಆಫ್ರಿಕಾ, ಬ್ರಿಟನ್ ನಲ್ಲಿ ಪತ್ತೆಯಾದ ರೂಪಾಂತರ ವೈರಸ್ ಅತಿ ವೇಗವಾಗಿ ಹರಡುತ್ತಿದೆ. ಈ ದೇಶಗಳಿಗೆ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ನೈಜೀರಿಯಾದಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ವೈರಸ್ ಅದಕ್ಕಿಂತಲೂ ಭಿನ್ನವಾಗಿದೆ. ನೈಜೀರಿಯಾದ ಒಸುನ್ ರಾಜ್ಯದಲ್ಲಿ ಇಬ್ಬರು ರೋಗಿಗಳ ಮಾದರಿಯನ್ನು ಪರೀಕ್ಷಿಸಿದಾಗ ಹೊಸ ಕೊರೊನಾ ಪ್ರಭೇದ ಪತ್ತೆಯಾಗಿರುವುದು ಅಧ್ಯಯನದಲ್ಲಿ ಎಂದು ಗೊತ್ತಾಗಿದ್ದು, ಮತ್ತಷ್ಟು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆಫ್ರಿಕಾ ಕೊರೋನಾ ನಿಯಂತ್ರಣ ಸಂಸ್ಥೆಯ ನಿರ್ದೇಶಕ ಹೇಳಿದ್ದಾರೆ. ನೈಜೇರಿಯಾ ರೋಗ ನಿಯಂತ್ರಣ ಸಂಸ್ಥೆ ಮತ್ತು ಆಫ್ರಿಕಾದ ಸಾಂಕ್ರಾಮಿಕ ರೋಗಗಳ ಜೀನೋಮಿಕ್ ಶ್ರೇಷ್ಠತಾ ಕೇಂದ್ರಗಳು ಅಧ್ಯಯನ ಮುಂದುವರೆಸಿವೆ.