ಇತ್ತೀಚೆಗೆ ಭಾರೀ ವೈರಲ್ ಆಗಿರುವ ’ದಿ ಫ್ಯಾಮಿಲ್ ಮ್ಯಾನ್’ ಶೋ ’ಚೆಲ್ಲಮ್ ಸರ್’ ಮೀಮ್‌ಗಳು ನೆಟ್ಟಿಗರಿಗೆ ಭಾರೀ ಖುಷಿ ಕೊಡುತ್ತಿವೆ. ಇದೀಗ ಉತ್ತರ ಪ್ರದೇಶ ಪೊಲೀಸ್ ಸಹ ’ಚೆಲ್ಲಮ್ ಸರ್’ ಮೀಮ್ ಕ್ಲಬ್ ಸೇರಿಕೊಂಡಿದೆ.
ನಿಮ್ಮ ಅದೃಷ್ಟ ಬದಲಿಸಬಲ್ಲದು 2 ರೂಪಾಯಿ ನಾಣ್ಯ..!
ಶೋನ ಜನಪ್ರಿಯತೆಯನ್ನು ತನ್ನದೇ ಒಂದು ಉದ್ದೇಶಕ್ಕೆ ಬಳಸಿಕೊಂಡ ಉ.ಪ್ರ. ಪೊಲೀಸ್, “ಯುಪಿ 112, ಎ 24/7 ಪ್ರತಿಯೊಂದು ಕೌಟುಂಬಿಕ ಸಂಕಷ್ಟಕ್ಕೂ ಪರಿಹಾರ, ಸರ್ವಕಾಲ ಸಹಾಯವಾಣಿ, ಎಲ್ಲಾ ಕಾಲಕ್ಕೂ ನಿಜವಾದ ಆಪತ್ಬಾಂಧವ” ಎಂದು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿ, ತನ್ನ ಸಹಾಯವಾಣಿಯ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದೆ.
ಕೊರೊನಾ 3ನೇ ಅಲೆ ಆತಂಕ: ಹೀಗಿರಲಿ ನಿಮ್ಮ ಮಕ್ಕಳ ಆಹಾರ ಕ್ರಮ
ಈ ಪೋಸ್ಟ್‌ಗಾಗಿ, ತನ್ನ 112 ಸಹಾಯವಾಣಿಯು ಸಂಕಷ್ಟದಲ್ಲಿರುವ ಜನರ ನೆರವಿಗೆ ಹೇಗೆಲ್ಲಾ ಬಂದಿದೆ ಎಂಬ ವಿವರಗಳಿದ್ದ ಪೇಪರ್ ಕಟಿಂಗ್‌ಗಳ ಚಿತ್ರದೊಂದಿಗೆ ಚೆಲ್ಲಮ್ ಸರ್‌ರ ಚಿತ್ರವನ್ನು ಕೊಲಾಜ್ ಮಾಡಿ ಲಗತ್ತಿಸಿದೆ.