36 ವರ್ಷದ ಸೀತಾದೇವಿ ಎಂಬವರು ಅನೇಕರಿಗೆ ಜೀವದಾನ ಮಾಡಿದ್ದಾರೆ. ಕೋವಿಡ್ನಿಂದ ತಮ್ಮ ತಾಯಿಯನ್ನ ಕಳೆದುಕೊಂಡ ಸೀತಾದೇವಿ ಇದೀಗ ಚೆನ್ನೈನ ʼಆಮ್ಲಜನಕ ಮಹಿಳೆʼ ಎಂಬ ಪಟ್ಟವನ್ನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ತಾಯಿಗೆ ಬಂದ ಸ್ಥಿತಿ ಯಾರಿಗೂ ಬರಕೂಡದು ಎಂದು ನಿರ್ಧರಿಸಿದ ಸೀತಾದೇವಿ ಆಟೋಗೆ ಆಕ್ಸಿಜನ್ ಸಂಪರ್ಕ ನೀಡಿದ್ದು ಈ ನೀಲಿ ಆಟೋದ ಸಹಾಯದಿಂದ ಅನೇಕರ ಜೀವ ಕಾಪಾಡಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆ ಹೊರಗೆ ನಿಂತುಕೊಳ್ಳುವ ಸೀತಾ ದೇವಿ ಆಮ್ಲಜನಕದ ಅಗತ್ಯ ಇರುವವರಿಗೆ ಹಾಸಿಗೆ ಸಿಗುವವರೆಗೂ ತನ್ನ ಆಟೋದಲ್ಲೇ ಆಶ್ರಯ ನೀಡ್ತಿದ್ದಾರೆ.
ನಾವು ಈಗಾಗಲೇ ಮುನ್ನೂರಕ್ಕೂ ಅಧಿಕ ಕೋವಿಡ್ ಹೊಂದಿದ್ದ ಜೀವಗಳನ್ನ ಕಾಪಾಡಿದ್ದೇವೆ. ಅವರಿಂದ ಯಾವುದೇ ಹಣವನ್ನ ಪಡೆಯದೇ ಈ ಸಹಾಯ ಮಾಡಲಾಗ್ತಿದೆ ಎಂದು ಸೀತಾ ದೇವಿ ಹೇಳಿದ್ರು.
ಆಕ್ಸಿಜನ್ ಅಭಾವದಿಂದಾಗಿ ಸೀತಾ ದೇವಿ ಮೇ 1ನೇ ತಾರೀಖಿನಂದು ತನ್ನ ತಾಯಿಯನ್ನ ಕೋವಿಡ್ನಿಂದ ಕಳೆದುಕೊಂಡಿದ್ದರು. ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಂಬುಲೆನ್ಸ್ಗಾಗಿ ಸೀತಾದೇವಿ ಕುಟುಂಬ ಬರೋಬ್ಬರಿ 12 ಗಂಟೆಗಳ ಕಾಲ ಕಾದಿತ್ತು. ಸೀತಾದೇವಿ ವೆಂಟಿಲೇಟರ್ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾದರೂ ಸಹ ತಮ್ಮ ತಾಯಿಯನ್ನ ದಾಖಲು ಮಾಡುವಷ್ಟರಲ್ಲಿ ತುಂಬಾನೇ ವಿಳಂಬವಾಗಿತ್ತು.
ತನ್ನ ತಾಯಿಗೆ ಬಂದ ಸ್ಥಿತಿ ಇನ್ಯಾರಿಗೂ ಬರಬಾರದು ಎಂದು ನಿರ್ಧರಿಸಿದ ಸೀತಾ ದೇವಿ ಆಮ್ಲಜನಕದ ತುರ್ತು ಅವಶ್ಯಕತೆ ಇರುವವರಿಗೆ ತಮ್ಮ ಆಟೋದಲ್ಲೇ ಆಕ್ಸಿಜನ್ ಸೌಲಭ್ಯ ನೀಡುವ ಕೆಲಸ ಮಾಡ್ತಿದ್ದಾರೆ.