ಮುಂಬೈ: ಬೆಂಗಳೂರಿನಲ್ಲಿ ಮಸಾಲದೋಸೆಯ ರುಚಿಗೆ ಮನಸೋತಿದ್ದ ಬ್ರಿಟೀಷ್ ಹೈಕಮೀಷನರ್ ಅಲೆಕ್ಸ್ ಎಲ್ಲಿಸ್, ಇದೀಗ ಮುಂಬೈನಲ್ಲಿ ವಡಾ ಪಾವ್ ಸವಿದಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರ ಪ್ರವಾಸದಲ್ಲಿರುವ ಎಲ್ಲಿಸ್ ಮುಖ್ಯಮಂತ್ರಿ ಹಾಗೂ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಇದರ ಜೊತೆಗೆ ಅವರು ದೇಸಿ ಖಾದ್ಯ ಸವಿಯುವತ್ತ ಕೂಡ ಒಲವು ತೋರಿರುವುದು ವಿಶೇಷ. ರಾಜ್ಯದ ಅತಿ ದೊಡ್ಡ ಹಬ್ಬವಾದ ಗಣೇಶ ಚತುರ್ಥಿ ಅಂಗವಾಗಿ ಅವರು ಗಣಪತಿ ಕಾರ್ಯಾಗಾರಕ್ಕೆ ಭೇಟಿ ನೀಡಿ, ಬಳಿಕ ಮುಂಬೈನ ಸಾಂಪ್ರದಾಯಿಕ ಸ್ಟ್ರೀಟ್ ಫುಟ್ ಸವಿದಿದ್ದಾರೆ.
ವೈರಲ್ ಆಯ್ತು ಹಿಂದಿ ಧಾರವಾಹಿಯೊಂದರ ದೃಶ್ಯ: ಸೀನ್ ನೋಡಿ ಸುಸ್ತಾದ್ರು ನೆಟ್ಟಿಗರು..!
ಗೇಟ್ ವೇ ಆಫ್ ಇಂಡಿಯಾದ ಎದುರು ತಿಂಡಿ ಸವಿಯುತ್ತಾ ಫೋಟೋಗೆ ಪೋಸ್ ನೀಡಿರುವ ದೃಶ್ಯವನ್ನು ಅವರು ಹಂಚಿಕೊಂಡಿದ್ದಾರೆ. “ಮುಂಬೈನಲ್ಲಿ ವಡಾ ಪಾವ್ ಸವಿಯಲು ಯಾವಾಗಲೂ ಸಮಯವಿದೆ” ಎಂದು ಬರೆದಿದ್ದಾರೆ.
ಇನ್ನು ಈ ಫೋಟೋಗೆ ನೆಟ್ಟಿಗರು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ತಾಜ್ ಹೋಟೆಲ್ ಅಂತಹ ಐಷಾರಾಮಿ ಹೋಟೆಲ್ ನಿಂದ ತಿಂಡಿಯ ರುಚಿಯನ್ನು ಅನುಭವಿಸುವ ಬದಲು ಬೀದಿ ಬದಿಗಳಲ್ಲಿ ಮಾರಾಟ ಮಾಡುವ ತಿಂಡಿ ಸವಿದರೆ ನಿಜವಾದ ರುಚಿ ಅನುಭವಿಸಬಹುದು” ಎಂದು ಹಲವರು ಲೇವಡಿ ಮಾಡಿದ್ದಾರೆ.
ವಡಾ ಪಾವ್ ಸವಿದಿದ್ದು ಮಾತ್ರವಲ್ಲದೆ ಎಲ್ಲಿಸ್ ಅವರು ನಗರದ ಪ್ರಸಿದ್ಧ ಡಬ್ಬಾವಾಲಾಗಳನ್ನು ಭೇಟಿಯಾಗಿದ್ದಾರೆ. ಅಲ್ಲದೆ ಅವರೊಂದಿಗೆ ಫೋಟೋ ಕೂಡ ಕ್ಲಿಕ್ಕಿಸಿದ್ದಾರೆ. ಜೊತೆಗೆ ಪ್ರಸಿದ್ಧ ಆಹಾರ ವಿತರಣಾ ಸಿಬ್ಬಂದಿ (ಡಬ್ಬಾವಾಲಾ) ಯು ಎಲ್ಲಿಸ್ ಅವರಿಗೆ ಮಲ್ಟಿ-ಟೈರ್ ಟಿಫಿನ್ ಬಾಕ್ಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.