alex Certify ಶಾಪಿಂಗ್‌ ನಂತರ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪಿಂಗ್‌ ನಂತರ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸಲು ಇಲ್ಲಿದೆ ಟಿಪ್ಸ್

ವರ್ಷದ ಅತ್ಯಂತ ಪ್ರಮುಖ ಹಬ್ಬವಾದ ದೀಪಾವಳಿ ಈಗ ತಾನೇ ಮುಗಿದಿದೆ. ಕುಟುಂಬಸ್ಥರು, ನೆಂಟರು, ಸ್ನೇಹಿತರು, ನೆರೆಹೊರೆಯವರು, ಹೊಸ ಪರಿಚಿತರೊಂದಿಗೆ ಸಂಭ್ರಮ -ಸಡಗರದಿಂದ ಬೆಳಕಿನ ಹಬ್ಬವನ್ನು ಆಚರಿಸಿಯಾಗಿದೆ.‌

ಹೊಸ ಬಟ್ಟೆಗಳು, ಸಿಹಿ ತಿಂಡಿಗಳು, ಪಟಾಕಿಗಳು, ಸುತ್ತಾಟಕ್ಕಾಗಿ ಭಾರಿ ವೆಚ್ಚವನ್ನು ಕೂಡ ಬಹುತೇಕರು ಮಾಡಿದ್ದಾರೆ.

ಉಳಿತಾಯದ ಹಣವನ್ನು ಕೆಲವರು ಇದಕ್ಕಾಗಿ ವ್ಯಯಿಸಿದರೆ, ಮತ್ತೆ ಕೆಲವರು ಕ್ರೆಡಿಟ್‌ ಕಾರ್ಡ್‌ಗಳ ಮೊರೆ ಹೋಗಿದ್ದಾರೆ.

ಹಾಗಾಗಿ ಸದ್ಯ, ಕಾರ್ಡಿನ ಬಿಲ್‌ ಪಾವತಿಯ ಬದ್ಧತೆಯು ಬಹುತೇಕರ ಎದುರಿಗಿದೆ.

ಇದಕ್ಕಾಗಿ ನೀವು ಅನುಸರಿಸಬಹುದಾದ ಸುಲಭ ಮಾರ್ಗಗಳು ಹೀಗಿವೆ. ಮೊದಲನೆಯದು, ಹಲವು ಕ್ರೆಡಿಟ್‌ ಕಾರ್ಡ್‌ಗಳ ಬಾಕಿ ಪಾವತಿಯ ಚಕ್ರದಲ್ಲಿ ನೀವು ಸಿಲುಕಿದ್ದರೆ ಮೊದಲು ಖರ್ಚು ಮಾಡಿದ್ದಕ್ಕೆ ಆದ್ಯತೆ ನೀಡಿ. ಅಂದರೆ 8, 18 ಹಾಗೂ 28ನೇ ತಾರೀಖಿನಂದು ಪಾವತಿಸಬೇಕಾಗಿರುವ ಕಾರ್ಡಿನ ಬಿಲ್‌ಗಳ ಪೈಕಿ 8ನೇ ತಾರೀಖಿಗೆ ಆದ್ಯತೆ ಕೊಡಿರಿ. ಇದರಿಂದಾಗಿ ಬಡ್ಡಿ ಹೆಚ್ಚಳ ಅಪಾಯದಿಂದ ನೀವು ಪಾರಾಗುತ್ತೀರಿ.

BIG BREAKING: 24 ಗಂಟೆಯಲ್ಲಿ ಮತ್ತೆ 9,119 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಒಂದೇ ದಿನದಲ್ಲಿ 396 ಜನ ಬಲಿ

ಎರಡನೆಯದು, ಹಲವು ಕ್ರೆಡಿಟ್‌ ಕಾರ್ಡಿನ ಬಿಲ್‌ಗಳ ಪೈಕಿ ಅತ್ಯಂತ ಕನಿಷ್ಠ ಮೊತ್ತವನ್ನು ಕೂಡ ಮೊದಲು ಪಾವತಿಸಿಬಿಡಬಹುದು. ಇದರಿಂದ ‘ಕ್ರೆಡಿಟ್‌ ಸ್ಕೋರ್‌’ ಉತ್ತಮಗೊಳ್ಳಲಿದೆ. ಮೂರನೆಯದಾಗಿ, ನಿಮ್ಮ ಕ್ರೆಡಿಟ್‌ ಕಾರ್ಡಿನ ಮೊತ್ತವು ದೊಡ್ಡದಿದ್ದಲ್ಲಿ, ಅದನ್ನು ಇಎಂಐ (ಮಾಸಿಕ ಕಂತುಗಳಾಗಿ) ಪರಿವರ್ತಿಸುವಂತೆ ಕ್ರೆಡಿಟ್‌ ಕಾರ್ಡ್‌ ಕಂಪನಿಗೆ ಮನವಿ ಮಾಡಬಹುದು. ಇದರಿಂದಾಗಿ ವಿಳಂಬದ ಪಾವತಿ, ಅದರ ಮೇಲಿನ ದಂಡ ಹೇರಿಕೆಯ ಅಪಾಯದಿಂದ ಪಾರಾಗಬಹುದು. ಅಂದಹಾಗೇ, ಇಎಂಐಗೆ ಪರಿವರ್ತನೆ ವೇಳೆ ಬಡ್ಡಿ ಹೆಚ್ಚಳ ಅಥವಾ ಕಡಿಮೆ ಮಾಡುವ ಬಗ್ಗೆಯೂ ಕಂಪನಿ ಜತೆಗೆ ತಪ್ಪದೇ ಚರ್ಚೆ ಮಾಡಿಕೊಳ್ಳಿರಿ.

ನಾಲ್ಕನೆಯ ಸಲಹೆ ಎಂದರೆ, ಎಲ್ಲ ಕಾರ್ಡುಗಳ ಬಾಕಿ ಮೊತ್ತವನ್ನು ಒಂದೇ ಕಡೆಗೆ ಜಮೆ ಮಾಡುವ ಸಾಹಸ ಮಾಡಬಹುದು. ಇದರಿಂದಾಗಿ, ಹೊಸ ಕಾರ್ಡ್‌ ವಿತರಕರ ಕಡೆಯಿಂದ 90 ದಿನಗಳ ಬಡ್ಡಿ ರಹಿತ ಪಾವತಿಗೆ ಅವಕಾಶ ಸಿಗಲಿದೆ. ಈ ಮೂಲಕ ಬಾಕಿ ಪಾವತಿಗೆ ಹೆಚ್ಚಿನ ಸಮಯವು ಕೂಡ ಸಿಕ್ಕಿದಂತಾಗಲಿದೆ.
ಇನ್ನು ಐದನೆಯದು ಹಾಗೂ ಪ್ರಮುಖ ಸಲಹೆ ಎಂದರೆ, ಬಾಕಿ ಮೊತ್ತ ಪಾವತಿ ದೊಡ್ಡದಾಗಿದ್ದಲ್ಲಿ ಕೂಡಲೇ ಕ್ರೆಡಿಟ್‌ ಕಾರ್ಡ್‌ ಬಳಕೆಯನ್ನು ನಿಲ್ಲಿಸಿಬಿಡಿ. ತಾತ್ಕಾಲಿಕವಾಗಿ ಅದನ್ನು ಎತ್ತಿಟ್ಟುಬಿಡಿ. ನಿಮ್ಮ ಆದಾಯ ಹೆಚ್ಚಿಸುವ ಕಡೆಗೆ ಗಮನಕೊಟ್ಟು, ಶೀಘ್ರವೇ ಕ್ರೆಡಿಟ್‌ ಕಾರ್ಡ್‌ ಬಾಕಿ ಮೊತ್ತ ಸಣ್ಣದಾಗಿಸುವ ಕಡೆಗೆ ಶ್ರಮಹಾಕಿರಿ.

ಕೊನೆಯದಾಗಿ, ಒಂದು ವೇಳೆ ಬಾಕಿ ಇರುವ ಎಲ್ಲ ಮೊತ್ತವನ್ನು ಪಾವತಿ ಮಾಡಲು ಆಗಿದ್ದಲ್ಲಿ ಕನಿಷ್ಠ ಬಾಕಿ ಮೊತ್ತ ಅಂದರೆ, ಪ್ರತಿ ಮಾಸಿಕ ಒಟ್ಟಾರೆ ಮೊತ್ತದ 5% (ಎಂಎಡಿ) ಪಾವತಿ ಮಾಡಿಬಿಡಿ. ಇಲ್ಲದೇ ಹೋದರೆ, ದಂಡ ಹೇರಿಕೆ ಮಾಡಲಾಗುವುದು. ಇದರಿಂದ ಕ್ರೆಡಿಟ್‌ ಸ್ಕೋರ್‌ಗೂ ಪೆಟ್ಟು ಬೀಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...