alex Certify BIG NEWS: ಕೊರೋನಾ ವೈರಸ್ ಸ್ವಾಭಾವಿಕವಲ್ಲವೆಂದು ಬಹುದೊಡ್ಡ ಅನುಮಾನ, ಚೀನಾದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ; ಆಂಥೋನಿ ಫೌಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ವೈರಸ್ ಸ್ವಾಭಾವಿಕವಲ್ಲವೆಂದು ಬಹುದೊಡ್ಡ ಅನುಮಾನ, ಚೀನಾದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ; ಆಂಥೋನಿ ಫೌಸಿ

ಕೊರೋನಾ ವೈರಸ್ ಮೂಲದ ಬಗ್ಗೆ ಮುಕ್ತ ತನಿಖೆ ನಡೆಸಬೇಕು ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಆಂಥೋನಿ ಫೌಸಿ ಹೇಳಿದ್ದಾರೆ.

ಕೊರೋನಾ ಸ್ವಾಭಾವಿಕ ಸೃಷ್ಟಿ ಎಂದು ಮನವರಿಕೆಯಾಗುವುದಿಲ್ಲ. ಅದರ ಮೂಲದ ಬಗ್ಗೆ ತನಿಖೆ ನಡೆಯಬೇಕು. ಕೊರೋನಾ ವೈರಸ್ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಚೀನಾ ಮೂಲದ ವೈರಸ್ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಕೊರೋನಾ ವೈರಸ್ ಸ್ವಾಭಾವಿಕವಾಗಿ ಅಭಿವೃದ್ಧಿ ಹೊಂದಿದೆ ಎಂದು ವಿಶ್ವಾಸ ಇಲ್ಲ. ಅದರ ಬಗ್ಗೆ ನನಗೆ ಮನವರಿಕೆಯಾಗಿಲ್ಲ ಹೆಚ್ಚಿನ ತನಿಖೆ ನಡೆಯಬೇಕಿದೆ. ವೈರಸ್ ಬಗ್ಗೆ ತನಿಖೆ ಮಾಡಿದವರು ಹೇಳುವಂತೆ ಪ್ರಾಣಿಗಳಿಂದ ಇದು ವ್ಯಕ್ತಿಗಳಿಗೆ ಹೇಗೆ ತಗುಲಿತು ಎಂದು ಪ್ರಶ್ನಿಸಿದ್ದಾರೆ. ಅಥವಾ ಬೇರೆ ಏನಾದರೂ ಕಾರಣವಿರಬಹುದಾ? ಅದನ್ನು ಕಂಡುಹಿಡಿಯಬೇಕಿದೆ. ವೈರಸ್ ಮೂಲವನ್ನು ಹುಡುಕುವ ತನಿಖೆಯ ಪರವಾಗಿ ನಾನು ಸಂಪೂರ್ಣವಾಗಿ ಬೆಂಬಲವಾಗಿ ಇದ್ದೇನೆ ಎಂದು ಆಂಟೋನಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...