ಕೊರೋನಾ ವೈರಸ್ ಮೂಲದ ಬಗ್ಗೆ ಮುಕ್ತ ತನಿಖೆ ನಡೆಸಬೇಕು ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಆಂಥೋನಿ ಫೌಸಿ ಹೇಳಿದ್ದಾರೆ.
ಕೊರೋನಾ ಸ್ವಾಭಾವಿಕ ಸೃಷ್ಟಿ ಎಂದು ಮನವರಿಕೆಯಾಗುವುದಿಲ್ಲ. ಅದರ ಮೂಲದ ಬಗ್ಗೆ ತನಿಖೆ ನಡೆಯಬೇಕು. ಕೊರೋನಾ ವೈರಸ್ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಚೀನಾ ಮೂಲದ ವೈರಸ್ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಕೊರೋನಾ ವೈರಸ್ ಸ್ವಾಭಾವಿಕವಾಗಿ ಅಭಿವೃದ್ಧಿ ಹೊಂದಿದೆ ಎಂದು ವಿಶ್ವಾಸ ಇಲ್ಲ. ಅದರ ಬಗ್ಗೆ ನನಗೆ ಮನವರಿಕೆಯಾಗಿಲ್ಲ ಹೆಚ್ಚಿನ ತನಿಖೆ ನಡೆಯಬೇಕಿದೆ. ವೈರಸ್ ಬಗ್ಗೆ ತನಿಖೆ ಮಾಡಿದವರು ಹೇಳುವಂತೆ ಪ್ರಾಣಿಗಳಿಂದ ಇದು ವ್ಯಕ್ತಿಗಳಿಗೆ ಹೇಗೆ ತಗುಲಿತು ಎಂದು ಪ್ರಶ್ನಿಸಿದ್ದಾರೆ. ಅಥವಾ ಬೇರೆ ಏನಾದರೂ ಕಾರಣವಿರಬಹುದಾ? ಅದನ್ನು ಕಂಡುಹಿಡಿಯಬೇಕಿದೆ. ವೈರಸ್ ಮೂಲವನ್ನು ಹುಡುಕುವ ತನಿಖೆಯ ಪರವಾಗಿ ನಾನು ಸಂಪೂರ್ಣವಾಗಿ ಬೆಂಬಲವಾಗಿ ಇದ್ದೇನೆ ಎಂದು ಆಂಟೋನಿ ಹೇಳಿದ್ದಾರೆ.