ತಿಂಗಳ ಮೊದಲ ದಿನದಿಂದಲೇ ದುಬಾರಿ ಜೀವನ ಶುರುವಾಗಿದೆ. ಒಂದು ಕಡೆ ಅಡುಗೆ ಅನಿಲದ ಬೆಲೆಯಾದ್ರೆ ಇನ್ನೊಂದು ಕಡೆ ಅಮುಲ್ ಹಾಲಿನ ಬೆಲೆ ಏರಿಕೆಯಾಗಿದೆ. ಅಮುಲ್ ನಂತ್ರ ಮತ್ತೊಂದು ಡೈರಿ ಕಂಪನಿ ಹಾಲಿನ ದರವನ್ನು ಹೆಚ್ಚಿಸುವ ಘೋಷಣೆ ಮಾಡಿದೆ. ಡೈರಿ ಉತ್ಪನ್ನಗಳನ್ನು ತಯಾರಿಸುವ ಪರಾಗ್ ಮಿಲ್ಕ್ ಫುಡ್ಸ್ ಕೂಡ ಬೆಲೆ ಏರಿಕೆ ಮಾಡಿದೆ.
ಪರಾಗ್ ಡೈರಿಯು ಗೋವರ್ಧನ್ ಬ್ರಾಂಡ್ ಅಡಿಯಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತದೆ. ಪರಾಗ್ ಡೈರಿಯು ಗೋವರ್ಧನ್ ಬ್ರಾಂಡ್ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವುದಾಗಿ ಹೇಳಿದೆ. ಹೊಸ ದರಗಳು ಮಾರ್ಚ್ ಒಂದರಿಂದಲೇ ಜಾರಿಗೆ ಬಂದಿವೆ. ಉತ್ಪಾದನಾ ವೆಚ್ಚ ಹೆಚ್ಚಾದ ಕಾರಣ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.
ಕಂಪನಿಯ ಈ ನಿರ್ಧಾರದ ನಂತ್ರ ಗೋವರ್ಧನ್ ಗೋಲ್ಡ್ ಮಿಲ್ಕ್ ಲೀಟರ್‌ಗೆ 48 ರೂಪಾಯಿ ಬದಲು 50 ರೂಪಾಯಿಯಾಗಲಿದೆ. ಇಂಧನ, ಪ್ಯಾಕೇಜಿಂಗ್, ಲಾಜಿಸ್ಟಿಕ್ಸ್ ಮತ್ತು ಮೇವಿನ ವೆಚ್ಚದಲ್ಲಿ ಹೆಚ್ಚಳವಾಗಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸುಮಾರು ಮೂರು ವರ್ಷಗಳ ನಂತರ, ಕಂಪನಿಯು ಬೆಲೆಗಳನ್ನು ಹೆಚ್ಚಿಸಿದೆ. ಬೆಲೆ ಏರಿಕೆಯ ಲಾಭ ರೈತರಿಗೂ ಸಿಗಲಿದೆ ಎಂದು ಕಂಪನಿ ತಿಳಿಸಿದೆ.