alex Certify ಆಶ್ರಮದಲ್ಲಿ ನಾಲ್ವರನ್ನು ಕೊಂದಿದ್ದ ಮಹಿಳೆ 17 ವರ್ಷಗಳ ಬಳಿಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಶ್ರಮದಲ್ಲಿ ನಾಲ್ವರನ್ನು ಕೊಂದಿದ್ದ ಮಹಿಳೆ 17 ವರ್ಷಗಳ ಬಳಿಕ ಅರೆಸ್ಟ್

ಅಮೆರಿಕ ಪ್ರಜೆ ಸೇರಿದಂತೆ ನಾಲ್ವರನ್ನು ಕೊಲೆಗೈದ ಆರೋಪದ ಮೇಲೆ ದೆಹಲಿ ಮಹಿಳೆಯೊಬ್ಬರನ್ನ ಅಹಮದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮೆಹ್ಸಾನಾ ಪಟ್ಟಣದ ಕಾದಿ ಪ್ರದೇಶದ ಉತ್ವಾ ಆಶ್ರಮದಲ್ಲಿ ನಡೆದ ನಾಲ್ವರ ಕೊಲೆಯ ಪ್ರಕರಣವನ್ನು ಅಹಮದಾಬಾದ್ ಪೊಲೀಸ್‌ನ ಕ್ರೈಂ ಬ್ರಾಂಚ್‌ ತನಿಖೆ ನಡೆಸುತ್ತಿತ್ತು. ಸುಳ್ಳು ಗುರುತೊಂದರ ಆಧಾರದ ಮೇಲೆ ಕಳೆದ ಎರಡು ದಶಕಗಳಿಂದ ವಾಸಿಸುತ್ತಿದ್ದ ದೆಹಲಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 2, 2004ರ ರಾತ್ರಿ ಆಶ್ರಮದ ಮಹಾಕಾಳಿ ಮಾತಾ ಮಂದಿರದ ಬಳಿ ನಾಲ್ವರ ಕೊಲೆ ಮಾಡಿದ ಆರೋಪದ ಮೇಲೆ ರಾಜ್ಕುಮಾರಿ ಅಲಿಯಾ ಡಿಸ್ಕೋ ಅಲಿಯಾಸ್ ಸರೋಜ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಮನಿಸಿ…! ಸೋಮವಾರ ಬೆಳಗ್ಗೆವರೆಗೆ ವೀಕೆಂಡ್ ಕರ್ಫ್ಯೂ ಜಾರಿ –ಅನಗತ್ಯ ಓಡಾಟಕ್ಕೆ ಬ್ರೇಕ್

ದೇವಸ್ಥಾನದ ಟ್ರಸ್ಟೀ ಚಿಮನ್ ಪಟೇಲ್ (70), ಸಾಧ್ವಿ ಮಾತಾಜಿ (35) , ಮೋಹನ್ ಲುಹಾರ್‌ (45) ಹಾಗೂ ಕರ್ಮಾನ್ ಪಟೇಲ್ (30) ದೇವಸ್ಥಾನದ ಆವರಣದಲ್ಲಿ ಹೆಣವಾಗಿ ಪತ್ತೆಯಾಗಿದ್ದರು. ಇದೇ ವೇಳೆ ಆಶ್ರಮದಿಂದ ಚಿನ್ನ, ಬೆಳ್ಳಿ ಸೇರಿದಂತೆ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಕಳುವಾಗಿದ್ದವು.

ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ ಕಾರಣ

ಆ ವೇಳೆ ಆಶ್ರಮದಲ್ಲಿ ವಾಸವಿದ್ದ ಮಹೇಂದ್ರ ಸಿಂಗ್ ಹಾಗೂ ಆತನ ಪತ್ನಿ ರಾಜ್ಕುಮಾರಿ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಘಟನೆ ಬಳಿಕ ನಾಪತ್ತೆಯಾದ ಈ ಜೋಡಿಯ ಪತ್ತೆ ಮಾಡಿಕೊಟ್ಟವರಿಗೆ 50,000 ರೂ.ಗಳ ಇನಾಮನ್ನೂ ಘೋಷಿಸಲಾಗಿತ್ತು.

ಆಗಸ್ಟ್‌ 2020ರಲ್ಲಿ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ ಗೋವಿಂದ್ ಎಂಬ ಸುಳ್ಳುನಾಮದೊಂದಿಗೆ ತಲೆತಪ್ಪಿಸಿಕೊಂಡಿದ್ದ ಮಹೇಂದ್ರನನ್ನು ಬಂಧಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...